ವಿಧಾನಸೌಧದಲ್ಲಿ ಸಚಿವ ಜಮೀರ್ ಗೆ ಜ್ಞಾನೋದಯ!

First Published 26, Jun 2018, 2:57 PM IST
Fortuner Issue: Zameer Ahmed Khan takes U Turn
Highlights

ರೈತರ ಸಾಲ ಮನ್ನಾ ಹೊರೆ ಸರಕಾರದ ಮೇಲಿದ್ದು ರೈತರಿಗಾಗಿ ಇರುವ ಕಾರನ್ನು ಬಿಡಲು ಸಿದ್ಧ, ಹೀಗೆಂದು ಹೇಳಿದ್ದು ಸಚಿವ  ಜಮೀರ್ ಅಹಮದ್ ಖಾನ್.
ಹೊಸ ಫಾರ್ಚುನರ್ ಕಾರ್ ಗೆ ಜಮೀರ್ ಬೇಡಿಕೆಯಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಹಾಗಾದರೆ ಜಮೀರ್ ಯಾಕೆ ಹೀಗೆ ಹೇಳಿದ್ರು.. ಮುಂದೆ ಓದಿ

ಬೆಂಗಳೂರು (ಜೂ.26) ರೈತರ ಸಾಲ ಮನ್ನಾ ಹೊರೆ ಸರಕಾರದ ಮೇಲಿದ್ದು ರೈತರಿಗಾಗಿ ಇರುವ ಕಾರನ್ನು ಬಿಡಲು ಸಿದ್ಧ, ಹೀಗೆಂದು ಹೇಳಿದ್ದು ಸಚಿವ  ಜಮೀರ್ ಅಹಮದ್ ಖಾನ್.
ಹೊಸ ಫಾರ್ಚುನರ್ ಕಾರ್ ಗೆ ಜಮೀರ್ ಬೇಡಿಕೆಯಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು.

ಸಚಿವರೊಬ್ಬರು ಇನ್ನೋವಾದಲ್ಲಿ ತಿರುಗಾಡಲು ಸಾಧ್ಯವೇ?

ಇದೀಗ ಯು ಟರ್ನ್ ತೆಗೆದುಕೊಂಡಿರುವ ಸಚಿವ ಮಾತಿನ ವರಸೆ ಬದಲಾಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿಡದ ಸಚಿವರು ಬಜೆಟ್ ನಲ್ಲಿ ರೈತರ ಸಾಲಮನ್ನಾ ವೇ ಪ್ರಮುಖವೇ ವಿಚಾರ . ಸಾಲ ಮನ್ನಾ ಪರಿಣಾಮ ಉಳಿದ ಇಲಾಖೆಗೆ ಹಣಕಾಸಿನ ಕೊರತೆಯಾಗುವುದು ಸಹಜ. ಸರಕಾರದ ಖಜಾನೆಯಲ್ಲಿ ಹಣವೇ ಇಲ್ಲ. ಹಾಗಾಗಿ ನಾವೆಲ್ಲರೂ ನಮ್ಮ ಇಲಾಖೆಗೆ ಹೆಚ್ಚಿನ ಹಣ ನಿರೀಕ್ಷೆ ಮಾಡೋದು  ಕಷ್ಟ ನಮ್ಮ ಬೇಡಿಕೆಯಲ್ಲಿ ಶೇ. 10 ರಷ್ಟು ಹಣ ಸಿಕ್ಕಿದರೂ ಸಾಕು ಎಂದು ಹೇಳಿದರು.

ಮಂತ್ರಿಗಿರಿ ತೋರಿಸಲು ಜಮೀರ್‌ಗೆ ಫಾರ್ಚುನರ್ ಬೇಕಂತೆ!

ರೈತರ ಸಾಲಮನ್ನಾದ  ವಿಚಾರ ಇರುವುದುದರಿಂದಲೇ ಬಳಕೆ ಮಾಡಿರುವ ಕಾರನ್ನು ನಾನು ಕೇಳಿದ್ದು. ನಾನೇನು ಹೊಸ ಕಾರು ಕೇಳಿಲ್ಲ. ನಾನೇನು ಬೆಂಝ್ ಕಾರು ಕೇಳಿರಲಿಲ್ಲ. ಮಾಧ್ಯಮಗಳು ಇದನ್ನೇ ದೊಡ್ಡ ಸುದ್ದಿ ಮಾಡಿವೆ ಎಂದರು. ರೈತರಿಗಾಗಿ ಈಗೀರುವ ಇನ್ನೋವಾ ಕಾರನ್ನು ಬೇಕಾದರೂ ಬಿಡಲು ಸಿದ್ಧವಿದ್ದೇನೆ ಎಂದು ಸಚಿವರು ಹೇಳಿದರು.

ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾವ ಬಂದಿದೆ ಎಂದು ಮಾತ್ರ ಹೇಳಿದ್ದೆ.  ಹೆಸರಿಡುವ ಸಂಬಂಧ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯವನ್ನು ಪಡೆದುಕೊಳ್ಳುತ್ತೆನೆ. ಯಡಿಯೂರಪ್ಪ ಕಲಾಂ ಹೆಸರಿಡಲು ಹೇಳಿದ್ದಾರೆ ಅದನ್ನು ವಿಮರ್ಶೆಗೆ ತೆಗೆದುಕೊಳ್ಳುತ್ತೇವೆ ಎಂದರು.

 

 

 

 

loader