ಮಾಜಿ ಟಿವಿ ಆ್ಯಂಕರ್ ತೇಜಸ್ವಿನಿ ಆತ್ಮಹತ್ಯೆ

First Published 18, Jun 2018, 5:52 PM IST
Former TV anchor Tejaswini commits suicide
Highlights

ಮಾಜಿ ಟಿವಿ ಆ್ಯಂಕರ್ ತೇಜಸ್ವಿನಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೇಜಸ್ವಿನಿ ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದಿಲ್ಲ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಪತಿಯ ವಿತಾರಣೆ ನಡೆಸಿದ್ದಾರೆ.

ವಿಜಯವಾಡ(ಜೂ.18): ತೆಲುಗು ಭಾಷೆಯ ಮಾಜಿ ಟಿವಿ ನಿರೂಪಕಿ ತೇಜಸ್ವಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದ ತೇಜಸ್ವಿನಿ, ಕೃಷ್ಣ ಜಿಲ್ಲೆಯ ಇಡುಪುಗಾಲ್ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ತೇಜಸ್ವಿನಿ ರೂಮ್‌ನಿಂದ ಹೊರಗೆ ಬಾರದ್ದನ್ನ ಗಮನಿಸಿದ ಕುಟುಂಬಸ್ಥರು ಬಾಗಿಲು ಒಡೆದು ಒಳಪ್ರವೇಶಿದಾಗ ಘಟನೆ ಬೆಳೆಕಿಗೆ ಬಂದಿದೆ. ತಕ್ಷಣವೇ ತೇಜಸ್ವಿಯನಿಯನ್ನ ಆಸ್ಪತ್ರೆಗೆ ದಾಖಲಿಸಲಾದರೂ ಪ್ರಯೋಜನವಾಗಲಿಲ್ಲ. 

ತೇಜಸ್ವಿನಿ 5 ವರ್ಷಗಳ ಹಿಂದೆ ಪವನ್ ಎಂಬುವರರನ್ನ ಮದುವೆಯಾಗಿದ್ದರು. ಪವನ್ ಹಾಗೂ ತೇಜಸ್ವಿನಿ ಜಾತಿ ಬೇರೇಯಾಗಿದ್ದ ಕಾರಣ ಇವರ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ಬಳಿಕ ಇವರಿಬ್ಬರು ಮಧ್ಯ ಜಗಳ ಕೂಡ ನಡೆದಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
 

loader