ಬಿಹಾರ(ಸೆ.10): ಆರ್ಜೆಡಿ ಮುಖಂಡ, ಲಾಲೂ ಪ್ರಸಾದ್ ಯಾದವ್ ಆಪ್ತ ಹಾಗೂ ಮಾಜಿ ಸಂಸದ ಶಹಾಬುದ್ದೀನ್ ಬಿಡುಗಡೆಯಾಗಿದ್ದಾರೆ.
11 ವರ್ಷದ ಬಳಿಕ ಜಾಮೀನಿನ ಮೇಲೆ ಬಿಹಾರದ ಬಾಗಲ್ಪುರ ಸೆಂಟ್ರಲ್ ಜೈಲಿನಿಂದ ಶಹಾಬುದ್ದೀನ್ ಬಿಡುಗಡೆಯಾಗಿದ್ದಾರೆ. ರಾಜೀವ್ ರೋಷನ್ ಹತ್ಯೆ ಪ್ರಕರಣದ ಅಪರಾಧಿಯಾಗಿ ಜೈಲು ಸೇರಿದ್ದ ಶಹಾಬುದ್ದೀನ್ಗೆ ಪಾಟ್ನಾ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಶಹಾಬುದ್ದೀನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಆಗಸ್ಟ್ 16, 2004ರಂದು ಸಿವಾನ್ ಜಿಲ್ಲೆಯಲ್ಲಿ ಸಹೋದರರಾದ ಗಿರೀಶ್ ರಾಜ್ ಹಾಗು ಸತೀಶ್ ರಾಜ್ರನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅದು ಅಲ್ಲದೇ ಸಿವಾನ್'ನಲ್ಲಿ ಜೂನ್ 16, 2014ರಲ್ಲಿ ಹಾಡಹಾಗಲೇ ರಾಜೀವ್ ರೋಷನ್ ಎಂಬಾತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧದಲ್ಲಿ ಜೈಲು ಸೇರಿದ್ದ.
