ರಾಜ್ಯಸಭೆ ಸದಸ್ಯರಾಗಿ ಡಾ. ಮನೋಮಹನ್ ಸಿಂಗ್ ಪ್ರಮಾಣವಚನ| ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದ ಡಾ. ಸಿಂಗ್| ಸಭಾಪತಿ ಎಂ. ವೆಂಕಯ್ಯನಾಯ್ಡು ತಮ್ಮ ಕೊಠಡಿಯಲ್ಲಿ ಸಿಂಗ್ ಅವರಿಗೆ ಪ್ರಮಾಣವಚನ| ರಾಜಸ್ತಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಡಾ. ಸಿಂಗ್|

ನವದೆಹಲಿ(ಆ.23): ರಾಜ್ಯಸಭೆಗೆ ಯಾವ ರಾಜ್ಯದಿಂದ ಸ್ಪರ್ಧಿಸುವುದು ಎಂಬ ಗೊಂದಲದಲ್ಲಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕೊನೆಗೂ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಇಂದು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯನಾಯ್ಡು ತಮ್ಮ ಕೊಠಡಿಯಲ್ಲಿ ಮನಮೋಹನ್ ಸಿಂಗ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. 

Scroll to load tweet…

ನಾಯ್ಡು ಕೊಠಡಿಯಲ್ಲಿ ಸರಳವಾಗಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಂ ನಬಿ ಅಜಾದ್, ಅಹ್ಮದ್ ಪಟೇಲ್, ಆನಂದ್ ಶರ್ಮಾ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಜರಿದ್ದರು. 

86 ವರ್ಷದ ಡಾ. ಮನಮೋಹನ್ ಸಿಂಗ್ ರಾಜಸ್ತಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಸಿಂಗ್ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.