Asianet Suvarna News Asianet Suvarna News

ಕಾಂಗ್ರೆಸ್ ಗೆ ಹೊಸ ಪವರ್ : ಪಕ್ಷ ಸೇರಿದ ಹಿರಿಯ ಮುಖಂಡ

ಕಾಂಗ್ರೆಸ್ ಗೆ ಮತ್ತೊಂದು ಬಲ ಬಂದಂತಾಗಿದೆ. ಹಿರಿಯ ಮುಖಂಡರೋರ್ವರನ್ನು ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆಯಾಗಿದ್ದಾರೆ. ಎನ್ ಸಿಪಿ ತೊರೆದು ಒಂದು ತಿಂಗಳ ಬಳಿಕ ತಾರಿಕ್ ಅನ್ವರ್ ಕಾಂಗ್ರೆಸ್ ಸೇರಿದ್ದಾರೆ. 

Former NCP Leader Tariq Anwar Joined Congress
Author
Bengaluru, First Published Oct 27, 2018, 3:01 PM IST
  • Facebook
  • Twitter
  • Whatsapp

ನವದೆಹಲಿ :  ನ್ಯಾಷನಲ್ ಕಾಂಗ್ರೆಸ್ ಪಕ್ಷವನ್ನು ತೊರೆದ ಒಂದು ತಿಂಗಳ ಬಳಿಕ ಇದೀಗ ತಾರಿಕ್ ಅನ್ವರ್ ಶನಿವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಬಳಿಕ ಅವರು ಪಕ್ಷವನ್ನು ಸೇರಿದ್ದಾರೆ ಎನ್ನಲಾಗಿದೆ. 

ಅನ್ವರ್ ಹಾಗೂ ಅವರ ಬೆಂಬಲಿಗರು ತುಘಲಕ್ ಬೀದಿಯ ನಿವಾಸದಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ್ದು ಈ ವೇಳೆ ಪಕ್ಷಕ್ಕೆ ಅವರನ್ನು ಸ್ವಾಗತಿಸಲಾಗಿದೆ. 

ಮಾಜಿ ಸಂಸದ ಅನ್ವರ್ ಕಳೆದ ಕೆಲ ದಿನಗಳ ಹಿಂದೆಯೇ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಹೇಳಿದ್ದರು.  ಶರದ್ ಪವಾರ್ ಅವರು ರಫೇಲ್ ಡೀಲ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮಾತನಾಡಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದ ಅವರು ಎನ್ ಸಿ ಪಿಗೆ ಗುಡ್ ಬೈ ಹೇಳಿದ್ದರು. 

ಇದೀಗ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಸೇರಿದ್ದಾರೆ. 

Follow Us:
Download App:
  • android
  • ios