ಮೈಸೂರು(ಸೆ.07): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಹೋರಾಟ ತೀವ್ರಗೊಳ್ಳುತ್ತಿದೆ. ಮಾಜಿ ಸಂಸದ ಎಚ್. ವಿಶ್ವನಾಥ್ ಅವರು ಸಿಎಂಗೆ ಪತ್ರ ಬರೆದು ಮಾನ ಮರ್ಯಾದೆ ಇದ್ದರೆ ಕುರ್ಚಿಯಿಂದ ಕೆಲಗಿಳಿಯಿರಿ ಎಂದು ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೋರ್ಟ್​ಗೆ ವಸ್ತುಸ್ಥಿತಿ ವಿವರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಧಿಕಾರದ ಆಸೆ ಬಿಟ್ಟು ಸಿಎಂ ಕುರ್ಚಿಯಿಂದ ಕೆಳಗಿಳಿಯಿರಿ, ಜೈಲಿಗೆ ಅಟ್ಟಿದರೂ ಜೈಲಿಗೆ ಹೋಗಲು ಸಿದ್ಧ ಎಂಬ ನಿರ್ಧಾರ ಕೈಗೊಳ್ಳಿ ಎಂದು ಆಗ್ರಹಿಸಿದ್ಧಾರೆ.

ಇದೇವೇಳೆ, ಸಿಎಂ, ನೀರಾವರಿ ಸಚಿವರು ಉಡಾಫೆಯಿಂದ ಮಾತನಾಡುವುದನ್ನು ಬಿಡಲಿ. ಸಿಎಂ ಸಿದ್ದರಾಮಯ್ಯ, ಕಾವೇರಿ ನೀರು ಕುಡಿದು ಬೆಳೆದವರು. ಜನರು ದಂಗೆ ಏಳುವ ಮುನ್ನ ಸಿಎಂ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೋಗಲಿ ಎಂದು ಪತ್ರದಲ್ಲಿ ಸಿಎಂ ವಿರುದ್ಧ ಎಚ್.ವಿಶ್ವನಾಥ್ ಕೆಂಡಕಾರಿದ್ದಾರೆ.