ಪ್ರತಿ ವರ್ಷ ಡಿಸೆಂಬರ್ 6 ರಂದು ಮೂಢನಂಬಿಕೆ ವಿರೋಧಿಸಿ ಸ್ಮಶಾನದಲ್ಲಿ  ಕಾರ್ಯಕ್ರಮ ಹಮ್ಮಿಕೊಳ್ಳುವ  ಸತೀಶ್ ಜಾರಕಿಹೊಳಿ ಸ್ವತಃ ಅವರೇ ಮೂಢನಂಬಿಕೆಯನ್ನು ಆಚರಿಸುತ್ತಿದ್ದಾರೆ. ಹೋದಲ್ಲೆಲ್ಲಾ ನಿಂಬೆಹಣ್ಣು ತೆಗೆದುಕೊಂಡು ಹೋಗುತ್ತಾರೆ.  

ಬೆಳಗಾವಿ (ಜು. 20): ಶಾಸಕ ಸತೀಶ್ ಜಾರಕಿಹೊಳಿ ಕೈಯಲ್ಲಿ ಯಾವಾಗಲೂ ನಿಂಬೆಹಣ್ಣು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ.

ಸಭೆ ಸಮಾರಂಭದಲ್ಲಿ, ಹಾಗೂ ಸಾರ್ವಜನಿಕರ ಭೇಟಿ ವೇಳೆ ಇವರ ಕೈಯಲ್ಲಿ ನಿಂಬೆಹಣ್ಣು ಇರುತ್ತೆ. ಕೈಯಲ್ಲಿ ನಿಂಬೆಹಣ್ಣು ನೋಡಿ ಸತೀಶ್ ಜಾರಕೀಹೊಳಿ ಅಭಿಮಾನಿಗಳು ತಬ್ಬಿಬ್ಬಾಗಿದ್ದಾರೆ. 

ಕಳೆದು ಅಮವಾಸ್ಯೆಯಿಂದ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಿನ್ನೆ ಬೆಳಗಾವಿಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಮಾರಂಭದಲ್ಲೂ ಸಾರ್ವಜನಿಕ ಭೇಟಿ ವೇಳೆ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡಿದ್ದರು. 

ಪ್ರತಿ ವರ್ಷ ಡಿಸೆಂಬರ್ 6 ರಂದು ಮೂಢನಂಬಿಕೆ ವಿರೋಧಿಸಿ ಸ್ಮಶಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಸತೀಶ್ ಜಾರಕಿಹೊಳಿ ಸ್ವತಃ ಅವರೇ ಮೂಢನಂಬಿಕೆಯನ್ನು ಆಚರಿಸುತ್ತಿದ್ದಾರೆ.