ಬೆಂಗಳೂರು[ಆ. 07]  ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಸಂತಾಪ ಸೂಚಿಸಿದ್ದಾರೆ.

ದೇಶ ಒಬ್ಬರು ಅತಿದೊಡ್ಡ ನಾಯಕಿಯನ್ನು ಕಳೆದುಕೊಂಡಿದೆ. ಅಂತಾರಾಷ್ಟ್ರೀಯ ವಿಚಾರದ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದರು. ಭಾರತದ ಸಂಪ್ರಾಯಗಳನ್ನು ವಿದೇಶಗಳಿಗೂ ವಿಸ್ತರಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ಬಳ್ಳಾರಿ- ಸುಷ್ಮಾ ಸ್ವರಾಜ್ ನಂಟನ್ನು ಮೆಲುಕು ಹಾಕಿದ ವೈದ್ಯ ದಂಪತಿ

ವಿದೇಶಾಂಗ ಇಲಾಖೆಯಯನ್ನು ಅವರು ನಿರ್ವಹಿಸಿದ ರೀತಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ವಿದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭ ಸುಷ್ಮಾ ತೆಗೆದುಕೊಳ್ಳುತ್ತಿದ್ದ ಸ್ಪಷ್ಟ ನೀತಿಗಳು ಎಂದೆಂದಿಗೂ ಮಾರ್ಗದರ್ಶಕ. ಅವರ ದೂರದೃಷ್ಟಿತ್ವ, ಮುಂದಾಲೋಚನೆಯ ಯೋಜನೆಗಳು ಸದಾ ಹಸಿರಾಗಿ ನಿಲ್ಲುತ್ತವೆ ಎಂದು  ಹೇಳಿದ್ದಾರೆ.

ಮಿಲಿಟರಿ, ಡಿಪ್ಲೋಮಸಿ, ವಿದೇಶದಲ್ಲಿದ್ದ ಭಾರತೀಯರ ಹಕ್ಕು ರಕ್ಷಣೆ, ಯಮನ್ ಮತ್ತು ಇಥಿಯೋಪಿಯಾ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರ ಎಲ್ಲವೂ ಅವರನ್ನು ಶ್ರೇಷ್ಠ ಸ್ಥಾನಕ್ಕೆ ಕೊಂಡೊಯ್ದಿದ್ದವು ಎಂದು ತಿಳಿಸಿದ್ದಾರೆ.