ಕುಮಾರ ಸಂಪುಟದ ಇಬ್ಬರು ಮಂತ್ರಿಗಳಿಗೆ ಸಿದ್ದರಾಮಯ್ಯ ಲವ್ ಲೆಟರ್!

Former chief Minister Siddaramaiah letter to Minister k g George, Sa Ra Mahesh
Highlights

ರಾಜ್ಯ ಸರಕಾರದೊಂದಿಗೆ ಮಾಜಿ ಸಿಎಂ ಪತ್ರ ವ್ಯವಹಾರ ಮುಂದುವರಿಸಿದ್ದಾರೆ. ಹಿಂದೆ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದ ಸಿದ್ದರಮಾಯ್ಯ ಈಗ ಕೆಲ ಸಚಿವರಿಗೂ ಪತ್ರ ಬರೆದಿದ್ದಾರೆ.. ಹಾಗಾದರೆ ಕತೆ ಏನು?
 

ಬಾಗಲಕೋಟೆ[ಜು.4]  ರಾಜ್ಯ ಸರಕಾರದ ಮೇಲೆ ತಮ್ಮದೇ ಧಾಟಿಯಲ್ಲಿ ಒತ್ತಡ ಹೇರುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಸಮರ ಮುಂದುವರಿಸಿದ್ದಾರೆ. ಬಾದಾಮಿಯಲ್ಲಿ ಕೈಗಾರಿಕಾ ಸಂಸ್ಥೆ ಹಾಗೂ ಪ್ರವಾಸಿಗರಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸುವಂತೆ ಬಾದಾಮಿಯ ಹಾಲಿ ಶಾಸಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. 

ಬೃಹತ್ ಕೈಗಾರಿಕಾ ಕೆ.ಜೆ. ಜಾರ್ಜ್ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಬಾದಾಮಿ, ಕೆರೂರ, ಗುಳೇದಗುಡ್ಡ, ಪಟ್ಟಣಗಳಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಐತಿಹಾಸಿಕ ಬಾದಾಮಿ, ಬನಶಂಕರಿ, ಮಹಾಕೂಟದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪ್ರವಾಸೋದ್ಯಮ ಸಚಿವರಿಗೂ ಪತ್ರ ರವಾನೆಯಾಗಿದೆ.

ಚಾಮುಂಡೇಶ್ವರಿ ಮತ್ತು ಬದಾಮಿ ಎರಡು ಕಡೆಯಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲು ಕಂಡಿದ್ದರು. ಬದಾಮಿ ಶಾಸಕರಾಗಿ ಸಿದ್ದರಾಮಯ್ಯ ವಿಧಾನಸಭೆ ಪ್ರತಿನಿಧಿಸುತ್ತಿದ್ದಾರೆ.

loader