ನವದೆಹಲಿ, [ಮಾ.16]: ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಂಜನ್ ಗೊಗೋಯ್ ಅವರನ್ನ ಇಂದು [ಸೋಮವಾರ] ರಾಜ್ಯಸಭೆ ನಾಮನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ನವೆಂಬರ್ 17 ರಂದು ರಂಜನ್ ಗೊಗೋಯ್ ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್​ ಸ್ಥಾನದಿಂದ ನಿವೃತ್ತಿಯಾಗಿದ್ದರು. 

ಇತಿಹಾಸ ಸೃಷ್ಟಿಸಿ ತೆರೆಯ ಮರೆಗೆ ಸಿಜೆಐ ಗೊಗೋಯ್

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನ ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ. ಒಟ್ಟು 12 ಮಂದಿಯನ್ನ ರಾಜ್ಯಸಭೆಗೆ ಆಯ್ಕೆ ಮಾಡುವ ವಿಶೇಷ ಅಧಿಕಾರವನ್ನ ರಾಷ್ಟ್ರಪತಿಗಳು ಹೊಂದಿದ್ದಾರೆ. 

ಇದರ ಮೇರೆಗೆ ಅಯೋಧ್ಯೆ, ನಿರ್ಭಯ ಕೇಸ್ ಸೇರಿದಂತೆ ಹಲವು ಪ್ರಮುಖ ಕೇಸ್ ಗಳ ಇತ್ಯರ್ಥಗೊಳಿಸಿದ ಹೆಗ್ಗಳಿಕೆ ಪಡೆದಿರುವ ನಿವೃತ್ತ ಸಿಜೆಐ ರಂಜನ್ ಗೊಗೋಯ್ ಅವರನ್ನ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.

ರಂಜನ್ ಗೊಗೋಯ್ ನಿವೃತ್ತಿ: ಬಿಟ್ಟು ಹೊರಟರು ರಂಜನೀಯ ತೀರ್ಪುಗಳ ಬುತ್ತಿ!

ಸರ್ಕಾರದ ನಿರ್ದೇಶನದ ಮೇರೆಗೆ ಇವರಿಗೆ ಯಾವುದೇ ವಿಪ್ ಅನ್ವಯ ಆಗಲ್ಲ. ಜೊತೆಗೆ ಯಾವುದೇ ಒಂದು ಶಾಸನವನ್ನ ಮತಕ್ಕೆ ಹಾಕುವ ಸಂದರ್ಭದಲ್ಲಿ ಸ್ವತಂತ್ರವಾಗಿ ನಿರ್ಧಾರವನ್ನ ತೆಗೆದುಕೊಳ್ಳುವ ಹಕ್ಕನ್ನ ಹೊಂದಿದ್ದರೂ, ಬಹುತೇಕ ಸಂದರ್ಭಗಳಲ್ಲಿ ಸರ್ಕಾರದ ಪರವಾಗಿಯೇ ಮತ ಚಲಾಯಿಸುತ್ತಾರೆ.

ಉದಾಹರಣೆಗೆ ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನ ರಾಜ್ಯಸಭೆ ನಾಮನಿರ್ದೇಶನ ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದು.