ಗ್ರಾಪಂ ಕಟ್ಟಡದ ತ್ರಿವರ್ಣ ಬಣ್ಣ ಅಳಿಸಿ ಪಕ್ಷದ ಬಣ್ಣ ಹಚ್ಚಿಸಿದ ಜಗನ್‌ ವಿವಾದ

ಆಂಧ್ರ ಪ್ರದೇಶದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರಕಾರದ ಕಾರ್ಯವೊಂದು ಇದೀಗ ವಿಪರೀತ ಟೀಕೆಗೆ ಗುರಿಯಾಗಿದೆ. ಗ್ರಾಮ ಪಂಚಾಯತಿ ಕಟ್ಟಡವೊಂದರ ತ್ರಿವರ್ಣ ತೆಗೆದು, YSRCP ಬಣ್ಣ ಹಚ್ಚಿರುವುದಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. 

Former Andhra CM Chandrababu Naidu Slams Jagan Govt for Replacing Tricolour With YSRCP Flags

ಅನಂತಪುರ (ಅ.31): ಇಲ್ಲಿನ ಗ್ರಾಮ ಪಂಚಾಯ್ತಿ ಕಟ್ಟಡದ ತ್ರಿವರ್ಣ ಧ್ವಜವನ್ನು ಅಳಿಸಿ ಹಾಕಿ ಅದರ ಮೇಲೆ ಪಕ್ಷದ ಬಣ್ಣ ಬಳಿಸುವ ಮೂಲಕ ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ರಾಜ್ಯದ ಗ್ರಾಮ ಪಂಚಾಯ್ತಿಗಳ ಕಚೇರಿಗಳಿಗೆ ಪಕ್ಷದ ಬಣ್ಣಗಳನ್ನೇ ಬಳಿಯಬೇಕೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಸೂಚನೆ ನೀಡಿತ್ತು. ಈ ಪ್ರಕಾರ ಗ್ರಾಮ ಪಂಚಾಯ್ತಿಗಳ ಕಚೇರಿಗಳಿಗೆ ಪಕ್ಷದ ಬಣ್ಣಗಳನ್ನೇ ಬಳಿಯಲಾಗುತ್ತಿದ್ದು, ಈ ಪೈಕಿ ಅನಂತಪುರ ಜಿಲ್ಲೆಯ ಅಮರಾಪುರಂ ಘಟಕದ ಅಧಿಕಾರಿಗಳು, ಗ್ರಾಮ ಆಡಳಿತದ ಕಚೇರಿಯೊಂದಕ್ಕೆ ಬಳಿಯಲಾಗಿದ್ದ ತ್ರಿವರ್ಣ ಧ್ವಜದ ಬಣ್ಣವನ್ನು ಅಳಿಸಿ ಹಾಕಿ, ಅದರ ಮೇಲೆ ಪಕ್ಷದ ಬಣ್ಣ ಬಳಿಸಿದ್ದಾರೆ.

ಮಾಧ್ಯಮಗಳಿಗೆ ಜಗನ್ ಮೂಗುದಾರ

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್‌, ‘ಇದು ರಾಷ್ಟ್ರ ಧ್ವಜದ ಕುರಿತಾಗಿ ನಮ್ಮ ವೈಎಸ್‌ಆರ್‌ ಕಾಂಗ್ರೆಸ್‌ಗೆ ಇರುವ ಗೌರವದ ಪ್ರತೀಕ. ನಾಳೆ ಇವರು ದೇಶದ ತ್ರಿವರ್ಣ ಧ್ವಜ ಹಾರಿಸುವ ಬದಲಿಗೆ ಬದಲಿಗೆ ಪಕ್ಷದ ಧ್ವಜವನ್ನೇ ಹಾರಿಸಬಹುದು. ಅಲ್ಲದೆ, ಸಮಾಧಿಗಳಿಗೂ ಪಕ್ಷದ ಬಣ್ಣವನ್ನೇ ಬಳಿಯಲಿದೆ’ ಎಂದು ವ್ಯಂಗ್ಯವಾಡಿದರು.

 

ಜಗನ್ ಮೋಹನ್ ರೆಡ್ಡಿ ಸರಕಾರದ ಈ ಕಾರ್ಯಕ್ಕೆ ಮಾಜಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸಹ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಭಾರತದ ತ್ರಿವರ್ಣಕ್ಕೆ ಇಷ್ಟು ಅಗೌರವ ತೋರಿಸಿದ್ದು ನಾನು ನೋಡಿಯೇ ಇರಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ಕಟ್ಟಡದ ಮೊದಲ ಹಾಗೂ ಈಗಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸರಕಾರ ಈ ಬಗ್ಗೆ ಕ್ಷಮೆ ಕೇಳಲೇ ಬೇಕೆಂದು ಆಗ್ರಹಿಸಿದ್ದಾರೆ.  

ಆಂಧ್ರ ಪ್ರದೇಶ ಸರಕಾರದ ಇಂಥದ್ದೊಂದು ಕಾರ್ಯಕ್ಕೆ ಬಿಜೆಪಿಯೂ ತೀವ್ರ ವಿರೋಧ ವ್ಯಕ್ತಪಡಿಸಿದ್ದು, 

ಜಗನ್ ಕಾರು ನಿಲ್ಲಿಸಿ ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್

ಪಕ್ಷದ ರಾಜ್ಯ ಅಧ್ಯಕ್ಷ ಕನ್ನ ಲಕ್ಷ್ಮಿನಾರಾಯಣ, ಸರಕಾರಿ ಕಟ್ಟಡವೊಂದಕ್ಕೆ ಪಕ್ಷದ ಬಣ್ಣ ಬಳಿದಿದ್ದು, ಜಗನ್ ಸರಕಾರ ಆಡಳಿತದಲ್ಲಿ ವೈಫಲ್ಯವಾಗಿದೆ ಎಂಬುದನ್ನುತೋರಿಸುತ್ತದೆ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಅಧಿಕಾರಿಗಳೂ ಸ್ಪಷ್ಟನೆ ನೀಡಿದ್ದು, ರಾಜ್ಯ ಪಂಚಯತ್ ರಾಜ್ ಹಾಗೂ ಗ್ರಾಮೀಣ ಅಭಿವೃದ್ಧಿ ಆಯುಕ್ತ ಎಂ.ಗಿರಿಜಾ ಶಂಕರ್ ನೀಡಿರುವ ಆದೇಶದಿಂದ ಪಕ್ಷದ ಬಣ್ಣವನ್ನು ಗ್ರಾಮ ಪಂಚಾಯತಿ ಕಟ್ಟಡಕ್ಕೆ ಹಚ್ಚಲಾಗಿದೆ. YSRCP ಪಕ್ಷದ ಬಣ್ಣದೊಂದಿಗೆ, ಜಗನ್‌ಮೋಹನ್ ರೆಡ್ಡಿ ಫೋಟೋವನ್ನೂ ಬರೆಯಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ, ಎಂದಿದ್ದಾರೆ.

ಅಲ್ಲದೇ ರಾಜ್ಯದಲ್ಲಿರುವ 11,158 ಪಂಚಾಯತಿ ಕಟ್ಟಡಗಳಿಗೂ, ಅಲ್ಲಿ ನಿಧಿ ಬಳಸಿ, ಬಣ್ಣ ಬದಲಿಸಬೇಕೆಂಬ ಆದೇಶವಿದೆಯಂತೆ. 

Latest Videos
Follow Us:
Download App:
  • android
  • ios