ಮರದಿಂದ ಬಿದ್ದು ಅನಾಥವಾದ ನೂರಾರು ಪಕ್ಷಿ ಮರಿಗಳನ್ನು ಅರಣ್ಯ ಇಲಾಖೆ  ರಕ್ಷಿಸಿದೆ.  ರಕ್ಷಣೆ ಮಾಡಿದ್ದ ನೂರಾರು ಮರಿ ಪಕ್ಷಿಗಳನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ರವಾನೆ ಮಾಡಲಾಗಿದೆ.

ಮಂಡ್ಯ (ನ.07): ಮರದಿಂದ ಬಿದ್ದು ಅನಾಥವಾದ ನೂರಾರು ಪಕ್ಷಿ ಮರಿಗಳನ್ನು ಅರಣ್ಯ ಇಲಾಖೆ ರಕ್ಷಿಸಿದೆ. ರಕ್ಷಣೆ ಮಾಡಿದ್ದ ನೂರಾರು ಮರಿ ಪಕ್ಷಿಗಳನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ರವಾನೆ ಮಾಡಲಾಗಿದೆ.

ನಿನ್ನೆ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಕ್ವಾಟರ್ಸ್'ನಲ್ಲಿ ಮರ ಕಡಿದಿದ್ದರಿಂದ ನೂರಾರು ಪಕ್ಷಿಗಳು ಕೆಳಗಡೆ ಬಿದ್ದು ಅನಾಥವಾಗಿದ್ದವು. ಕೆಳಗೆ ಬಿದ್ದ ನೂರಾರು ಪಕ್ಷಿಗಳನ್ನು ಕೆ.ಆರ್.ಪೇಟೆಯ ಅರಣ್ಯಾಧಿಕಾರಿಗಳು ಪಂಜರ ಮತ್ತು ರಟ್ಟಿನ ಡಬ್ಬದಲ್ಲಿಟ್ಟು ಪಕ್ಷಿಧಾಮಕ್ಕೆ ರವಾನಿಸಿದ್ದಾರೆ.

ಆಪರೇಷನ್ ಅಮ್ಮ ಹೆಸರಲ್ಲಿ ಮರಿ ಪಕ್ಷಿಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.