Asianet Suvarna News Asianet Suvarna News

ವಿಧಿವಿಜ್ಞಾನ ಪರೀಕ್ಷೆಯಲ್ಲೂ ಇವಿಎಂ ಪಾಸ್

2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ, ಪರ್ವಟ್ಟಿ ಕ್ಷೇತ್ರಕ್ಕೆ ಬಳಸಿದ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಇವಿಎಂಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸುವಂತೆ ಆದೇಶಿಸಿತ್ತು.

Forensic report No evidence of tampering in EVM
  • Facebook
  • Twitter
  • Whatsapp

ನವದೆಹಲಿ(ಜು.15): ಇತ್ತೀಚೆಗೆ ಚುನಾವಣಾ ಆಯೋಗ ವಿದ್ಯುನ್ಮಾನ ಮತಯಂತ್ರವನ್ನು ತಿರುಚಿ ತೋರಿಸು ವಂತೆ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿ ಗೆದ್ದ ಬೆನ್ನಲ್ಲೇ, ವಿಧಿವಿಜ್ಞಾನ ಪರೀಕ್ಷೆಯಲ್ಲೂ ಇವಿಎಂ ದುರ್ಬಳಕೆ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. 2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ, ಪರ್ವಟ್ಟಿ ಕ್ಷೇತ್ರಕ್ಕೆ ಬಳಸಿದ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಇವಿಎಂಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸುವಂತೆ ಆದೇಶಿಸಿತ್ತು.

ಹೈದರಾಬಾದ್‌ನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಇವಿಎಂಗಳನ್ನು ಪರೀಕ್ಷೆಗೆ ಗುರಿಪಡಿಸಲು ಸೂಚಿಸಿತ್ತು. ಇವಿಎಂನ ಕಂಟ್ರೋಲ್ ಯುನಿಟ್ ಮತ್ತು ಎರಡು ಬ್ಯಾಟರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇವಿಎಂಗಳನ್ನು ಕಂಪ್ಯೂಟರ್‌ನಿಂದ ನಿಯಂತ್ರಿಸುವುದು ಅಥವಾ ಯಾವುದೇ ನೆಟ್‌ವರ್ಕ್‌ನೊಂದಿಗೂ ಬೆಸೆಯುವುದು ಸಾಧ್ಯವಿಲ್ಲ. ಅವುಗಳನ್ನು ತಿರುಚಿರುವ ಬಗ್ಗೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಪ್ರಯೋಗಾಲಯದ ವರದಿ ತಿಳಿಸಿದೆ.

 

Follow Us:
Download App:
  • android
  • ios