ಇಂಗ್ಲೆಂಡ್‌ನ ಸುದ್ದಿ ಪತ್ರಿಕೆ ‘ದ ಗಾರ್ಡಿಯನ್’ನಲ್ಲೂ ಜಯಾ ಜೀವನ ಚರಿತ್ರೆ ಪ್ರಕಟಗೊಂಡಿದೆ. ತಮಿಳುನಾಡಿನ ‘ಉಕ್ಕಿನ ಮಹಿಳೆ’ ಎಂದು ಪತ್ರಿಕೆ ಬಣ್ಣಿಸಿದೆ. ವಾಷಿಂಗ್ಟನ್ ಪೋಸ್ಟ್‌ನಲ್ಲಿ ಭಾರತದ ರಾಜಕೀಯ ವಲಯದಲ್ಲಿನ ಲಿಂಗ ತಾರತಮ್ಯ ಭಾವನೆಯ ನಡುವೆ, ಜಯಾ ನಿರ್ವಹಿಸಿದ ಪಾತ್ರದ ಕುರಿತಂತೆ ವಿವರಿಸಲಾಗಿದೆ.

ತಮಿಳುನಾಡು ಸಿಎಂ ಜಯಲಲಿತಾ ನಿಧನ ಕುರಿತಂತೆ ಜಾಗತಿಕ ಮಾಧ್ಯಮಗಳಲ್ಲೂ ದೊಡ್ಡ ಮಟ್ಟದ ಸುದ್ದಿಯಾಗಿದೆ. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ‘ತಮಿಳುನಾಡು ನಾಯಕಿಯ ನಿಧನದಿಂದ ದಕ್ಷಿಣ ಭಾರತದ ಅಕಾರ ಶೂನ್ಯತೆ’ ಎಂಬ ತಲೆಬರಹದಡಿ ಲೇಖನವೊಂದು ಪ್ರಕಟವಾಗಿದೆ. ತಮಿಳುನಾಡಿನ ರಾಜಕಾರಣದಲ್ಲಿ ಅಮ್ಮಾ ನಿರ್ವಹಿಸಿದ ಪಾತ್ರದ ಬಗ್ಗೆ ವರದಿ ವಿವರಿಸಿದೆ.

ಇಂಗ್ಲೆಂಡ್‌ನ ಸುದ್ದಿ ಪತ್ರಿಕೆ ‘ದ ಗಾರ್ಡಿಯನ್’ನಲ್ಲೂ ಜಯಾ ಜೀವನ ಚರಿತ್ರೆ ಪ್ರಕಟಗೊಂಡಿದೆ. ತಮಿಳುನಾಡಿನ ‘ಉಕ್ಕಿನ ಮಹಿಳೆ’ ಎಂದು ಪತ್ರಿಕೆ ಬಣ್ಣಿಸಿದೆ. ವಾಷಿಂಗ್ಟನ್ ಪೋಸ್ಟ್‌ನಲ್ಲಿ ಭಾರತದ ರಾಜಕೀಯ ವಲಯದಲ್ಲಿನ ಲಿಂಗ ತಾರತಮ್ಯ ಭಾವನೆಯ ನಡುವೆ, ಜಯಾ ನಿರ್ವಹಿಸಿದ ಪಾತ್ರದ ಕುರಿತಂತೆ ವಿವರಿಸಲಾಗಿದೆ. ಪಾಕಿಸ್ತಾನದ ಪತ್ರಿಕೆಗಳಲ್ಲೂ ಜಯಾ ನಿಧನದ ಸುದ್ದಿ ವರದಿಯಾಗಿದೆ. ದೀರ್ಘ ಕಾಲದ ಅನಾರೋಗ್ಯದ ಬಳಿಕ ಜಯಾ ನಿಧನರಾದ ಬಗ್ಗೆ ಬಹುತೇಕ ಪತ್ರಿಕೆಗಳು ವರದಿ ಮಾಡಿವೆ. ಏಷ್ಯಾದ ಇತರ ಪ್ರಮುಖ ಪತ್ರಿಕೆಗಳಾದ ದ ಸನ್ (ಮಲೇಷ್ಯಾ), ಡೈಲಿ ನ್ಯೂಸ್ (ಶ್ರೀಲಂಕಾ), ದ ಸ್ಟ್ರೈಟ್ಸ್ ಟೈಮ್ಸ್ (ಸಿಂಗಾಪುರ) ಸೇರಿದಂತೆ ವಿವಿಧ ಪತ್ರಿಕೆಗಳ ವೆಬ್ ವಾಹಿನಿಗಳಲ್ಲಿ ಜಯಾ ನಿಧನದ ಸುದ್ದಿ ವರದಿಯಾಗಿದೆ.