ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಒಟ್ಟಾಗಿ ಫಾರಿನ್‌ ಟೂರ್‌ ಹೋಗಿರಲಿಕ್ಕಿಲ್ಲ. ಆಗಾಗ ಶೂಟಿಂಗ್‌ ಕಾರಣಕ್ಕೆ ಅಥವಾ ಫ್ಯಾಮಿಲಿ ಜೊತೆ ಹೋಗಿರಬಹುದೇನೋ? ಆದರೆ ಇದೇ ಮೊದಲು ಸ್ಯಾಂಡಲ್‌ವುಡ್‌ನ ಹಲವು ಸ್ಟಾರ್‌ಗಳು ಚಿತ್ರೀಕರಣದ ಕಾರಣಕ್ಕಾಗಿ ಫಾರಿನ್‌ ಟೂರ್‌ನಲ್ಲಿ ಇದ್ದಾರೆ. ಕಿಚ್ಚ ಸುದೀಪ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಧ್ರುವ ಸರ್ಜಾ, ಹರಿಪ್ರಿಯಾ, ರಚಿತಾ ರಾಮ್‌, ಶಾನ್ವಿ ಶ್ರೀವಾತ್ಸವ್‌ ಈಗ ವಿದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಫಾರಿನ್‌ ಡೈರಿ ವಿವರ ಇಲ್ಲಿದೆ.

ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಒಟ್ಟಾಗಿ ಫಾರಿನ್‌ ಟೂರ್‌ ಹೋಗಿರಲಿಕ್ಕಿಲ್ಲ. ಆಗಾಗ ಶೂಟಿಂಗ್‌ ಕಾರಣಕ್ಕೆ ಅಥವಾ ಫ್ಯಾಮಿಲಿ ಜೊತೆ ಹೋಗಿರಬಹುದೇನೋ? ಆದರೆ ಇದೇ ಮೊದಲು ಸ್ಯಾಂಡಲ್‌ವುಡ್‌ನ ಹಲವು ಸ್ಟಾರ್‌ಗಳು ಚಿತ್ರೀಕರಣದ ಕಾರಣಕ್ಕಾಗಿ ಫಾರಿನ್‌ ಟೂರ್‌ನಲ್ಲಿ ಇದ್ದಾರೆ. ಕಿಚ್ಚ ಸುದೀಪ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಧ್ರುವ ಸರ್ಜಾ, ಹರಿಪ್ರಿಯಾ, ರಚಿತಾ ರಾಮ್‌, ಶಾನ್ವಿ ಶ್ರೀವಾತ್ಸವ್‌ ಈಗ ವಿದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಫಾರಿನ್‌ ಡೈರಿ ವಿವರ ಇಲ್ಲಿದೆ.

ಬ್ಯಾಂಕಾಕ್'ನಲ್ಲಿ ಕಿಚ್ಚ ಸುದೀಪ್:

ಕಿಚ್ಚ ಸುದೀಪ್‌ ಬ್ಯಾಂಕಾಕ್‌ನಲ್ಲಿದ್ದು ವಾರವೇ ಕಳೆದಿದೆ. ಜೋಗಿ ಪ್ರೇಮ್‌ ನಿರ್ದೇಶನದ ‘ದಿ ವಿಲನ್‌' ಚಿತ್ರಕ್ಕೆ ಅಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರದ ಸಾಹಸ ಸನ್ನಿವೇಶಗಳ ಜತೆಗೆ ಮಾತಿನ ಭಾಗದ ಚಿತ್ರೀಕರಣಕ್ಕಾಗಿ ನಟ ಸುದೀಪ್‌ ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಬ್ಯಾಂಕಾಕ್‌ನಿಂದ ಚಿತ್ರತಂಡ ಸೋಮವಾರ ಥಾಯ್‌ಲ್ಯಾಂಡ್‌ ನತ್ತ ಮುಖ ಮಾಡಿದೆ. ಥಾಯ್‌ಲ್ಯಾಂಡ್‌ನ ಸುಂದರ ತಾಣ ಕ್ರಾಬಿ ಬೀಚ್‌ನಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕ ಜೋಗಿ ಪ್ರೇಮ್‌ ಸಿದ್ಧತೆ ನಡೆಸಿದ್ದಾರೆ.

ಯೂರೋಪಿನಲ್ಲಿ ದರ್ಶನ್:

‘ತಾರಕ್‌' ಚಿತ್ರೀಕರಣಕ್ಕಾಗಿ ನಟ ದರ್ಶನ್‌ ವಾರದಷ್ಟುಕಾಲ ಮಲೇಶಿಯಾದಲ್ಲಿ ನೆಲೆ ನಿಂತಿದ್ದರು. ಅವರೊಂದಿಗೆ ನಟಿಯರಾದ ಶ್ರುತಿ ಹರಿಹರನ್‌, ಶಾನ್ವಿ ಶ್ರೀವಾತ್ಸವ್‌ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಈಗ ಚಿತ್ರ ತಂಡ ಯುರೋಪ್‌ನತ್ತ ಮುಖ ಮಾಡಿದೆ. ಇಟಲಿ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಒಂದು ವಾರ ಅಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸದ್ಯಕ್ಕೆ ಸಿನಿರಸಿಕರ ನೆಚ್ಚಿನ ದಾಸ ವಿದೇಶದಲ್ಲಿಯೇ ಇರಲಿದ್ದಾರೆ. ಮಿಲನ ಪ್ರಕಾಶ್‌ ಬಹು ದಿನಗಳ ನಂತರ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರವಿದು.

ಸ್ಲೋವೇನಿಯಾದಲ್ಲಿ ಧ್ರುವ ಸರ್ಜಾ:

ನಟ ಧ್ರುವ ಸರ್ಜಾ ಕೂಡ ವಿದೇಶದಲ್ಲಿದ್ದಾರೆ. ಭರ್ಜರಿ ಚಿತ್ರದ ಹಾಡುಗಳ ಚಿತ್ರೀಕರಣ ಸ್ಲೋವೇನಿಯಾದಲ್ಲಿ ನಡೆಯುತ್ತಿದೆ. ಚಿತ್ರೀಕರಣಕ್ಕಾಗಿ ನಿರ್ದೇಶಕ ಚೇತನ್‌ ಕುಮಾರ್‌ ತಂಡದೊಂದಿಗೆ ವಿದೇಶಕ್ಕೆ ಹಾಕಿದ್ದಾರೆ. ಧ್ರುವ ಸರ್ಜಾ ಜತೆಗೆ ರಚಿತಾ ರಾಮ್‌ ಹಾಗೂ ಹರಿಪ್ರಿಯಾ ವಿದೇಶಕ್ಕೆ ಹೋಗಿದ್ದು, ನಾಲ್ಕೈದು ದಿನಗಳಿಂದ ಅಲ್ಲಿ ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚೆಗೆ ಸ್ಲೋವೇನಿಯಾ ಕೂಡ ಕನ್ನಡ ಚಿತ್ರರಂಗದ ಮಂದಿಗೆ ಹಾಟ್‌ ಸ್ಪಾಟ್‌ ಆಗಿದೆ. ‘ಮುಂಗಾರು ಮಳೆ 2 'ಚಿತ್ರದ ಚಿತ್ರೀಕರಣಕ್ಕಾಗಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಲ್ಲಿಗೆ ಹೋಗಿ ಬಂದಿದ್ದರು.

ಇಟಲಿಯಲ್ಲಿ ಪುನೀತ್:

'ಅಂಜನೀಪುತ್ರ' ಹಾಡುಗಳ ಚಿತ್ರೀಕರಣಕ್ಕಾಗಿ ಪುನೀತ್‌ ರಾಜಕುಮಾರ್‌ ಇನ್ನೇನು ಇಟೆಲಿಯ ವಿಮಾನ ಹತ್ತಲಿದ್ದಾರೆ. ಅಮ್ಮನ ಅಂತಿಮ ಕ್ರಿಯೆಗಳನ್ನು ಮುಗಿಸಿದ ಪುನೀತ್‌ ಚಿತ್ರೀಕರಣಕ್ಕೆ ಮರಳಿ, ಇಟೆಲಿಯಲ್ಲಿ ರಶ್ಮಿಕಾ ಮಂದಣ್ಣ ಜೊತೆ ಡುಯೆಟ್‌ ಹಾಡಲಿದ್ದಾರೆ.

ಲಂಡನ್ನಿಗೆ ರಮೇಶ್ :

ಈಗಾಗಲೇ ವಿದೇಶದಲ್ಲಿ ಇದ್ದವರದ್ದು ಈ ಕತೆಯಾದರೆ, ಇನ್ನು ಅಲ್ಲಿಗೆ ಹೊರಟು ನಿಂತವರು ಸಾಕಷ್ಟುಮಂದಿ ಇದ್ದಾರೆ. ಬಟರ್‌ ಫ್ಲೇ ಚಿತ್ರೀಕರಣಕ್ಕಾಗಿ ನಿರ್ದೇಶಕ ರಮೇಶ್‌ ಅರವಿಂದ್‌ ಕೂಡ ವಿದೇಶಕ್ಕೆ ಹೊರಟಿದ್ದಾರಂತೆ.

ಮಲೇಶಿಯಾಕ್ಕೆ ಶಿವರಾಜಕುಮಾರ್:

ವಿಲನ್‌ ಚಿತ್ರತಂಡವನ್ನು ಶಿವರಾಜ್‌ಕುಮಾರ್‌ ಎರಡು ವಾರಗಳ ಹಿಂದೆಯೇ ಸೇರಿಕೊಳ್ಳಬೇಕಾಗಿತ್ತು. ತಾಯಿಯ ಅಂತ್ಯಕ್ರಿಯೆಗಳನ್ನು ಮುಗಿಸಿ, ಲೀಡರ್‌ ಚಿತ್ರದ ಓಪನಿಂಗ್‌ ಸಾಂಗ್‌ ಶೂಟಿಂಗ್‌ ಮಗಿಸಿ, ನಾಳೆಯಿಂದಲೇ ಶಿವರಾಜಕುಮಾರ್‌ ಮಲೇಷಿಯಾಕ್ಕೆ ತೆರಳಲಿದ್ದಾರೆ. ಅಲ್ಲಿ ಸತತವಾಗಿ ಚಿತ್ರೀಕರಣ ನಡೆಸಲಿದ್ದಾರೆ.