ನಂತರ ಸ್ಥಾನದಲ್ಲಿ ಅಮೀರ್ ಖಾನ್ 80 ಕೋಟಿ, ಹೃತಿಕ್ ರೋಷನ್ 73.6 ಕೋಟಿ(ಮಹೇಂಜೋದಾರೋ, ಕಾಬಿಲ್ ಚಿತ್ರ) ಪಡೆದಿದ್ದಾರೆ.

ಫೋರ್ಬ್ಸ್ ಅತೀ ಹೆಚ್ಚು ಸಂಭಾವನೆ ಪಡೆಯುವ ಕಳೆದ ವರ್ಷದ 10 ಬಾಲಿವುಡ್ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಸ್ಥಾನದಲ್ಲಿ ಶಾರೂಕ್ 243 ಕೋಟಿ ರೂ. ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ರಾಹಿಸ್ ಚಿತ್ರಕ್ಕೆ ಅಷ್ಟು ಮೊತ್ತದ ಸಂಭಾವನೆ ಪಡೆದಿದ್ದರು. ಟಾಪ್ 10 ನಟರಲ್ಲಿ ಕರ್ನಾಟಕದ ದಿಪೀಕಾ ಪಡುಕೋಣೆ ಕೂಡ ಸ್ಥಾನ ಪಡೆದಿದ್ದಾರೆ.

2ನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದು ಇತ್ತೀಚಿಗಷ್ಟೆ ಗಲ್ಲಾಪೆಟ್ಟಿಗೆಯಲ್ಲಿ ಸೋತು ಹೋದ ಟ್ಯೂಬ್'ಲೈಟ್ ಚಿತ್ರಕ್ಕೆ 236 ಕೋಟಿ ಹಣ ಪಡೆದಿದ್ದಾರೆ. ಟಿವಿ ರಿಯಾಲಿಟಿ ಶೋ'ಗಳಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚು ಹಣ ಗಳಿಸುವ ಟಾಪ್ 10 ಸ್ಥಾನಗಳಲ್ಲಿ ಸಲ್ಮಾನ್'ಗೆ 9ನೇ ಸ್ಥಾನವಿದೆ.

3ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ 224 ಕೋಟಿ ಜಾನಿ ಎಲ್'ಎಲ್'ಬಿ, ಹೌಸ್'ಫುಲ್ 3 ಹಾಗೂ ರುಸ್ತುಂ ಚಿತ್ರಗಳಿಗೆ ಪಡೆದಿದ್ದಾರೆ. ನಂತರ ಸ್ಥಾನದಲ್ಲಿ ಅಮೀರ್ ಖಾನ್ 80 ಕೋಟಿ, ಹೃತಿಕ್ ರೋಷನ್ 73.6 ಕೋಟಿ(ಮಹೇಂಜೋದಾರೋ, ಕಾಬಿಲ್ ಚಿತ್ರ) ಪಡೆದಿದ್ದಾರೆ.

6ನೇ ಸ್ಥಾನದಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳಿಂದ 70 ಕೋಟಿ ಪಡೆದಿದ್ದು, ನಾಯಲಿಯಲ್ಲಿಯೇ ಮೊದಲಿಗರಾಗಿದ್ದಾರೆ. ರಣ್'ವೀರ್ ಸಿಂಗ್ ಹಾಗೂ ಪ್ರಿಯಾಂಕಾ ತಲಾ 64 ಕೋಟಿ ಸಂಭಾವನೆ ಪಡೆದಿದ್ದಾರೆ. ಬಾಲಿವುಡ್ ಬಾದ್'ಶಾಹ ಅಮಿತಾಭ್ ಬಚ್ಚನ್ ಪಿಂಕ್ ಸಿನಿಮಾ ಹಾಗೂ ವಿವಿಧ ಕಂಪನಿಗಳ ಬ್ರಾಂಡ್ ಅಂಬಾಸಿಡರ್'ಗಳಾಗಿ 57 ಕೋಟಿ ಹಾಗೂ 10ನೇ ಸ್ಥಾನದಲ್ಲಿ ರಣಬೀರ್ ಕಪೂರ್ 54 ಕೋಟಿ ಸಂಭಾವನೆ ಪಡೆದಿದ್ದಾರೆ.