ಲೋಕಸಭೆಯಲ್ಲಿ ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದ ಆರು ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಇಂದಿನಿಂದ 5 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ. ಗೌರವ್ ಗೋಗೋಯ್, ಸುಶ್ಮಿತಾ ದೇವ್, ರಣಜೀತ್ ರಂಜನ್, ಅಧೀರ್ ರಂಜನ್, ಕೆ ಸುರೇಶ್ ಹಾಗೂ ಕೆ.ರಾಘವನ್ ಅಮಾನತುಗೊಂಡ ಸಂಸದರು.
ನವದೆಹಲಿ (ಜು.24): ಲೋಕಸಭೆಯಲ್ಲಿ ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದ ಆರು ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಇಂದಿನಿಂದ 5 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ. ಗೌರವ್ ಗೋಗೋಯ್, ಸುಶ್ಮಿತಾ ದೇವ್, ರಣಜೀತ್ ರಂಜನ್, ಅಧೀರ್ ರಂಜನ್, ಕೆ ಸುರೇಶ್ ಹಾಗೂ ಕೆ.ರಾಘವನ್ ಅಮಾನತುಗೊಂಡ ಸಂಸದರು.
ಇತ್ತೀಚಿಗೆ ನಡೆಯುತ್ತಿರುವ ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ, ಬೋಫೊರ್ಸ್ ಪ್ರಕರಣಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸುತ್ತಿರುವ ವೇಳೆ ಈ ಸಂಸದರು ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದು ಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಹಾಗಾಗಿ ಸುಮಿತ್ರಾ ಮಹಾಜನ್ 6 ಮಂದಿ ಸಂಸದರನ್ನು ಅಮಾನತುಗೊಳಿಸಿದರು. ಇದರಿಂದ ಕುಪಿತಗೊಂಡ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಘೋಷಣೆ ಕೂಗಿದರು.
