ತಾಯಿ,ಮಗು ಸೇರಿದಂತೆ ಐವರು ರಸ್ತೆ ವಿಭಜಕದಲ್ಲಿ ನಿಂತು ರಸ್ತೆ ದಾಟಲು ಮುಂದಾಗುತ್ತಿದ್ದರು. ಆ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಗುದ್ದಿದ ಪರಿಣಾಮ ಐವರು 30 ಅಡಿ ದೂರಕ್ಕೆ ಬಿದ್ದರು.

ಪುಣೆ(ಏ.18):ಕಾರೊಂದು ಗುದ್ದಿದ ವೇಗಕ್ಕೆ ತಾಯಿ ಮತ್ತು ಮಗು 30 ಅಡಿ ದೂರಕ್ಕೆ ಬಿದ್ದು ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಯಿ,ಮಗು ಸೇರಿದಂತೆ ಐವರು ರಸ್ತೆ ವಿಭಜಕದಲ್ಲಿ ನಿಂತು ರಸ್ತೆ ದಾಟಲು ಮುಂದಾಗುತ್ತಿದ್ದರು. ಆ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಗುದ್ದಿದ ಪರಿಣಾಮ ಐವರು 30 ಅಡಿ ದೂರಕ್ಕೆ ಬಿದ್ದರು. ಮಗು ಸ್ಥಳದಲ್ಲೆ ಮೃತಪಟ್ಟರೆ ತಾಯಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದೃಶ್ಯ ಎಲ್ಲಡೆ ವೈರಲ್ ಆಗಿದೆ. ಕಾರು ಚಾಲನೆ ಮಾಡಿದ ಮಹಿಳೆಯನ್ನು ಬಂಧಿಸಲಾಗಿದೆ.