ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ರ್ಯಾಲಿಗೆ ಸಂಬಂಧಿಸಿದಂತೆ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಕಾರ್ಯಕರ್ತರನ್ನು ಬಂಧಿಸುತ್ತಿದ್ದರೆ, ಮತ್ತೊಂದೆಡೆ ಭದ್ರತಾ ದೃಷ್ಟಿಯಿಂದ ಯಡಿಯೂರಪ್ಪರನ್ನು ಮನೆಯಿಂದ ಹೊರಬರದಂತೆ ಪೊಲೀಸರು ಸೂಚಿಸಿದ್ದಾರೆ. ಈ ಮಧ್ಯೆ ಬಿಜೆಪಿ ಕಾರ್ಯಕರ್ತರಿಗಾಗಿ ತಯಾರಿಸಿದ್ದ ಊಟವೇ ನಾಪತ್ತೆಯಾಗಿದೆ ಎಂಬ ಮಾಹಿತಿಯೂ ಲಭಿಸಿದೆ.
ಬೆಂಗಳೂರು(ಸೆ.05): ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ರ್ಯಾಲಿಗೆ ಸಂಬಂಧಿಸಿದಂತೆ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಕಾರ್ಯಕರ್ತರನ್ನು ಬಂಧಿಸುತ್ತಿದ್ದರೆ, ಮತ್ತೊಂದೆಡೆ ಭದ್ರತಾ ದೃಷ್ಟಿಯಿಂದ ಯಡಿಯೂರಪ್ಪರನ್ನು ಮನೆಯಿಂದ ಹೊರಬರದಂತೆ ಪೊಲೀಸರು ಸೂಚಿಸಿದ್ದಾರೆ. ಈ ಮಧ್ಯೆ ಬಿಜೆಪಿ ಕಾರ್ಯಕರ್ತರಿಗಾಗಿ ತಯಾರಿಸಿದ್ದ ಊಟವೇ ನಾಪತ್ತೆಯಾಗಿದೆ ಎಂಬ ಮಾಹಿತಿಯೂ ಲಭಿಸಿದೆ.
ಬಿಜೆಪಿ ರ್ಯಾಲಿ ಹಿನ್ನೆಲೆಯಲ್ಲಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗಾಗಿ ನೆಲಮಂಗಲದ ಗುಡೇಮಾರನಳ್ಳಿ ಬಳಿಯ ಸಮುದಾಯ ಭವನವೊಂದರಲ್ಲಿ ಊಟವನ್ನು ತಯಾರಿಸಲಾಗಿತ್ತು. ಆದರೀಗ ರಾತ್ರೋ ರಾತ್ರಿ ಈ ಊಟ ನಾಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ನಿನ್ನೆ ರಾತ್ರಿಯೇ ಈ ಪ್ರದೇಶದಲ್ಲಿದ್ದ ಕಾರ್ಯಕರ್ತರನ್ನು ಕುದೂರು ಪೊಲೀಸರು ತೆರವುಗೊಳಿಸಿ, ಬಳಿಕ ಕಾರ್ಯಕರ್ತರಿಗಾಗಿ ತಯಾರಿಸಿದ್ದ ಈ ಊಟವನ್ನು ಪೊಲೀಸರೇ ಅಲ್ಲಿಂದ ಸಾಗಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
10 ಸಾವಿರ ಕಾರ್ಯಕರ್ತರಿಗಾಗಿ ತಯಾರಾಗಿದ್ದ ಈ ಊಟ ನಾಪತ್ತೆಯಾಗಿರುವುದು ಬಹಳಷ್ಟು ಕುತೂಹಲ ಕೆರಳಿಸಿದೆ.
