ಫುಡ್ ಪಾರ್ಕ್ ಯೋಜನೆ: ಪತಂಜಲಿ ಸಿಇಒ ಜೊತೆ ಯೋಗಿ ಚರ್ಚೆ

Food park project: UP CM Yogi Adityanath reaches out to Patanjali CEO
Highlights

ತಮ್ಮ ಕನಸಿನ ಯೋಜನೆಯಾದ ಪತಂಜಲಿ ಫುಡ್ ಪಾರ್ಕ್ ಗೆ ಉತ್ತರಪ್ರದೇಶ ಸರ್ಕಾರ ಉದಾಸೀನ ಧೋಋಣೆ ಅನುಸರಿಸುತ್ತಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಮುನಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಂದು ಪತಂಜಲಿ ಸಂಸ್ಥೆಯ ಸಿಇಒ  ಆಚಾರ್ಯ ಬಾಲಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಯೋಜನೆ ಪೂರ್ಣಗೊಳಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ನವದೆಹಲಿ(ಜೂ.6): ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯು ತನ್ನ ಮೆಗಾ ಫುಡ್ ಪಾರ್ಕ್ ಯೋಜನೆ ಸ್ಥಳಾಂತರಿಸುವ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. 

ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪತಂಜಲಿಯ ಆರು ಸಾವಿರ ಕೋಟಿ ರೂ. ಫುಡ್ ಪಾರ್ಕ್ ಸ್ಥಾಪಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾಗಿ ತಿಳಿಸಿದರು. ಫುಡ್ ಪಾರ್ಕ್ ಯೋಜನೆ ರದ್ದುಗೊಂಡಿಲ್ಲ, ಬದಲಿಗೆ ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಸಿದ್ದವಿದೆ ಎಂದು ಯೋಗಿ ಭರವಸೆ ನೀಡಿದ್ದಾರೆ.

ಈಗಾಗಲೇ ಯೋಜನೆಗೆ ಭೂಮಿ ನೀಡಲಾಗಿದ್ದು, ಫುಡ್ ಪಾರ್ಕ್ ಸ್ಥಾಪನೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವನಿಶ್ ಅವಸ್ಥಿ ಮಾಹಿತಿ ನೀಡಿದ್ದಾರೆ. ಗ್ರೇಟರ್ ನೊಯ್ದಾ ಪ್ರದೇಶದಲ್ಲಿ ಸುಮಾರು 450 ಎಕರೆ ಪ್ರದೇಶದಲ್ಲಿ 6000 ಕೋಟಿ ರೂ. ವೆಚ್ಚದಲ್ಲಿ ಫುಡ್ ಪಾರ್ಕ್ ನ್ನು ನಿರ್ಮಿಸಲು ಪತಂಜಲಿ ಸಂಸ್ಥೆ ನಿರ್ಧರಿಸಿತ್ತು. ಇದಕ್ಕಾಗಿ ನವೆಂಬರ್ 2016ರಲ್ಲಿ ಅಖಿಲೇಶ್ ಯಾದವ್ ಸರ್ಕಾರ ಪತಂಜಲಿ ಸಂಸ್ಥೆಗೆ ಯಮುನಾ ಎಕ್ಸ್ ಪ್ರೆಸ್ ವೇ ಬಳಿ 450 ಎಕರೆ ಭೂಮಿಯನ್ನೂ ಮಂಜೂರು ಮಾಡಿತ್ತು.

loader