ಪ್ರಧಾನಿ ಮೊದಿ ನಿನ್ನೆ ಬಹರೈಚ್'ಗೆ ಆಗಮಿಸಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ದಟ್ಟ ಮಂಜಿನಿಂದಾಗಿ ಅವರ ಹೆಲಿಕಾಪ್ಟರ್ ಬಹರೈಚ್'ನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ ರ್ಯಾಲಿಯನ್ನು ರದ್ದುಗೊಳಿಸುವ ಬದಲು ಮೊಬೈಲ್​ ಮೂಲಕವೇ ಪರಿವರ್ತನ್ ರ್ಯಾಲಿ ಉದ್ದೇಶಿಸಿ ಮಾತನಾಡಿದರು.

ನವದೆಹಲಿ(ಡಿ.12): ಪ್ರಧಾನಿ ನರೇಂದ್ರ ಮೋದಿ ಮೊಬೈಲ್​ ಮೂಲಕ ಉತ್ತರ ಪ್ರದೇಶದ ಬಹರೈಚ್''ನಲ್ಲಿ ನಡೆದ 'ಪರಿವರ್ತನ್ ರ್ಯಾಲಿ'ಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಪ್ರಧಾನಿ ಮೊದಿ ನಿನ್ನೆ ಬಹರೈಚ್'ಗೆ ಆಗಮಿಸಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ದಟ್ಟ ಮಂಜಿನಿಂದಾಗಿ ಅವರ ಹೆಲಿಕಾಪ್ಟರ್ ಬಹರೈಚ್'ನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ ರ್ಯಾಲಿಯನ್ನು ರದ್ದುಗೊಳಿಸುವ ಬದಲು ಮೊಬೈಲ್​ ಮೂಲಕವೇ ಪರಿವರ್ತನ್ ರ್ಯಾಲಿ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಗೂಂಡಾ ರಾಜ್ ಇದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಜನ ಬೇಸತ್ತು ಹೋಗಿದ್ದಾರೆ. ಪೊಲೀಸರಿಂದಲೂ ಈ ಗೂಂಡಾಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನೀವು ಮುಕ್ತಿ ಪಡೆಯಬೇಕಾದರೆ ಗೂಂಡಾಗಳನ್ನು ಬೆಂಬಲಿಸುತ್ತಿರುವವರನ್ನು ತಿರಸ್ಕರಿಸಿ, ಬಿಜೆಪಿಗೆ ಬೆಂಬಲಿಸಿ ಎಂದು ಕರೆ ನೀಡಿದರು.