ಖಾದರ್ ಆರೋಪಿಸಿರುವ ಪ್ರಕಾರ, ಸಿಎಂ ಇಬ್ರಾಹಿಂ ಪತ್ನಿ ನಿನ್ನೆ ಬೆಳಗ್ಗೆ ಮೂಸಂಬಿ ಜ್ಯೂಸ್'ನಲ್ಲಿ ಗರ್ಭಪಾತದ ಮಾತ್ರೆ ಹಾಕಿ ತಮ್ಮ ಮಗಳು ಇಫಾಳಿಗೆ ಕುಡಿಸಿರುತ್ತಾರೆ. ವಿಕ್ರಮ್ ಆಸ್ಪತ್ರೆಗೆ ಕರೆದೊಯ್ದು ಅಬಾರ್ಷನ್ ಮಾಡಿಸಲಾಗುತ್ತದೆ.
ಬೆಂಗಳೂರು(ಜ. 03): ಮಾಜಿ ಸಚಿವ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಕುಟುಂಬಸ್ಥರ ವಿರುದ್ಧ ಗರ್ಭಪಾತದ ಆರೋಪ ಎದುರಾಗಿದೆ. ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದ ಸಿಎಂ ಇಫಾಳಿಗೆ ಹಣ್ಣಿನ ಜ್ಯೂಸ್'ನಲ್ಲಿ ಗರ್ಭಪಾತದ ಮಾತ್ರೆ ಹಾಕಿ ಕುಡಿಸಿ ಗರ್ಭಪಾತ ಮಾಡಿರುವ ಕುರಿತು ಆರೋಪಗಳು ಕೇಳಿಬರುತ್ತಿವೆ. ಜ್ಯೂಸ್'ನಲ್ಲಿ ಮಾತ್ರೆ ಬೆರೆಸಿ ಕುಡಿಸಿದ್ದು ಇಬ್ರಾಹಿಂ ಪತ್ನಿ ಎನ್ನಲಾಗಿದೆ. ಅಲ್ಲದೇ, ಅಳಿಯ ಫೈಸಲ್ ಮೇಲೆ ಇಬ್ರಾಹಿಂ ಪುತ್ರ ಮಹಮ್ಮದ್ ಫಯಾಜ್ ಹಲ್ಲೆ ಮಾಡಿದ ಆರೋಪವೂ ಕೇಳಿಬರುತ್ತಿದೆ. ಈ ಸಂಬಂಧ ಇಬ್ರಾಹಿಂ ಸೋದರ ಖಾದರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದಾರೆ.
ಯಾಕೆ ಮಾಡಿಸಿದ್ದು?
ಸಿಎಂ ಇಬ್ರಾಹಿಂ ಅವರ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಅವರ ಪುತ್ರಿ ಇಫಾ ತಾನು ಪ್ರೀತಿಸಿದ ಫೈಸಲ್ ಅವರನ್ನು ಏಳು ತಿಂಗಳ ಹಿಂದೆ ವರಿಸಿರುತ್ತಾರೆ. ಇಬ್ರಾಹಿಂ ಅವರ ಸೋದರ ಸಿಎಂ ಖಾದರ್ ಅವರ ಪುತ್ರನಾದ ಫೈಸಲ್ ಸಂಬಂಧದ ವರಸೆಯಲ್ಲಿ ಇಫಾಳಿಗೆ ಸೋದರನಾಗಬೇಕು. ಹೀಗಾಗಿ, ಈ ಮದುವೆಗೆ ಸಿಎಂ ಇಬ್ರಾಹಿಂ ಕುಟುಂಬದ ವಿರೋಧವಿತ್ತೆನ್ನಲಾಗಿದೆ. ಈ ನಡುವೆ ಗರ್ಭಿಣಿಯಾದ ಇಫಾಳನ್ನು ತವರು ಮನೆಗೆ ಬಿಡಲು ಫೈಸಲ್ ಕಳೆದ ತಿಂಗಳು ಬಂದಿರುತ್ತಾರೆ. ಆಗ ಫೈಸಲ್ ಮೇಲೆ ಮೊಹಮ್ಮದ್ ಫಯಾಜ್ ಹಲ್ಲೆ ನಡೆಸಿದರೆನ್ನಲಾಗಿದೆ.
ಖಾದರ್ ಆರೋಪಿಸಿರುವ ಪ್ರಕಾರ, ಸಿಎಂ ಇಬ್ರಾಹಿಂ ಪತ್ನಿ ನಿನ್ನೆ ಬೆಳಗ್ಗೆ ಮೂಸಂಬಿ ಜ್ಯೂಸ್'ನಲ್ಲಿ ಗರ್ಭಪಾತದ ಮಾತ್ರೆ ಹಾಕಿ ತಮ್ಮ ಮಗಳು ಇಫಾಳಿಗೆ ಕುಡಿಸಿರುತ್ತಾರೆ. ಸಂಜೆ ಇಫಾಳಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ನಂತರ ವಿಕ್ರಮ್ ಆಸ್ಪತ್ರೆಗೆ ಕರೆದೊಯ್ದು ಅಬಾರ್ಷನ್ ಮಾಡಿಸಲಾಗುತ್ತದೆ. ಈ ವಿಷಯವು ಸಿಎಂ ಇಬ್ರಾಹಿಂ ಅವರಿಗೆ ತಿಳಿಯದೆಯೇ ನಡೆದಿರುತ್ತದೆ ಎಂಬುದು ಖಾದರ್ ಆರೋಪ.
