ಒಂದು ಕಡೆ ತೀವ್ರ ಬರಗಾಲದಿಂದ ತತ್ತರಿಸಿದ ಬೆಳಗಾವಿ ಜಿಲ್ಲೆಯ ರೈತರು ತಮ್ಮ ಜಾನುವಾರುಗಳಿಗೆ ಮೇವಿಗಾಗಿ ಪರದಾಡುತ್ತಿದ್ದಾರೆ. ಇನ್ನೊಂದೆಡೆ  ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿರುವ ಮೇವನ್ನು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಟ್ರಾಕ್ಟ್ರರ್ ಸಮೇತ ಚಿಕ್ಕೋಡಿ ತಹಶಿಲ್ದಾರ್ ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ (ಮಾ.16): ಒಂದು ಕಡೆ ತೀವ್ರ ಬರಗಾಲದಿಂದ ತತ್ತರಿಸಿದ ಬೆಳಗಾವಿ ಜಿಲ್ಲೆಯ ರೈತರು ತಮ್ಮ ಜಾನುವಾರುಗಳಿಗೆ ಮೇವಿಗಾಗಿ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿರುವ ಮೇವನ್ನು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಟ್ರಾಕ್ಟ್ರರ್ ಸಮೇತ ಚಿಕ್ಕೋಡಿ ತಹಶಿಲ್ದಾರ್ ವಶಕ್ಕೆ ಪಡೆದಿದ್ದಾರೆ.

ಇಂತಹದೊಂದು ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ಜಿಲ್ಲಾಡಳಿತ ಪಕ್ಕದ ಮಹಾರಾಷ್ಟ್ರಕ್ಕೆ ಮೇವು ಸಾಗಾಟವನ್ನು ನಿಷೇಧಿಸಿದ್ದು ಅಂದಾಜು ಒಂದು ಲಕ್ಷ ಮೌಲ್ಯದ ಮೇವನ್ನು ತಹಶಿಲ್ದಾರ್ ಚಿದಂಬರ ಕುಲಕರ್ಣಿ ವಶಕ್ಕೆ ಪಡೆದಿದ್ದು ದಂಡ ವಿಧಿಸಿದ್ದಾರೆ.ಚಿಕ್ಕೋಡಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.