ಟಿಪ್ಪು ಜಯಂತಿ ವಿಚಾರದಲ್ಲಿ ಪಕ್ಷಗಳು ಕಚ್ಚಾಟ ನಡೆಸುವುದನ್ನು ಬಿಟ್ಟು ರೈತರ ಕಡೆ ಗಮನ ಹರಿಸಬೇಕು. ಇಲ್ಲದಿದ್ದರೆ ಹೇಗೆ ಹೋರಾಟ ಮಾಡಬೇಕು ಎಂಬುದು ಗೊತ್ತಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಸಿದರು.

ಚಿತ್ರದುರ್ಗ/ದಾವಣಗೆರೆ: ಟಿಪ್ಪು ಜಯಂತಿ ವಿಚಾರದಲ್ಲಿ ಪಕ್ಷಗಳು ಕಚ್ಚಾಟ ನಡೆಸುವುದನ್ನು ಬಿಟ್ಟು ರೈತರ ಕಡೆ ಗಮನ ಹರಿಸಬೇಕು. ಇಲ್ಲದಿದ್ದರೆ ಹೇಗೆ ಹೋರಾಟ ಮಾಡಬೇಕು ಎಂಬುದು ಗೊತ್ತಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಸಿದರು.

ಅನ್ನದಾತರ ಸಂಕಷ್ಟ ತಿಳಿಯಲು ಸೋಮವಾರ ತಮ್ಮ ರಾಜ್ಯ ಪ್ರವಾಸ ಆರಂಭಿಸಿದ ಅವರು ಚಿತ್ರದುರ್ಗ ತಾಲೂಕಿನ ಭರಮಸಾಗರದ ರೈತರ ಜಮೀನಿಗೆ ಭೇಟಿ ನೀಡಿ, ಸೈನಿಕ ಕೀಟಬಾಧೆಯಿಂದ ನಾಶವಾಗಿರುವ ಮೆಕ್ಕೆಜೋಳದ ಬೆಳೆಗಳನ್ನು ವೀಕ್ಷಿಸಿ ಮಾತನಾಡಿದರು.

 ಈ ನಡುವೆ ರೈತರ ಸಮಸ್ಯೆಗಳ ಕುರಿತು ಮಾತನಾಡಲು ಲೋಕಸಭಾ ಅಧಿವೇಶನದಲ್ಲಿ ನನಗೆ ಸರಿಯಾಗಿ ಅವಕಾಶ ನೀಡದೆ ತುಚ್ಛವಾಗಿ ಕಾಣಲಾಗುತ್ತಿದೆ ಎಂದು ದೇವೇಗೌಡ ಅವರು ದಾವಣಗೆರೆಯಲ್ಲಿ ಬೇಸರ ವ್ಯಕ್ತಪಡಿಸಿದರು