ಈ ಬಾರಿ ಪ್ರವಾಹದಿಂದ ತತ್ತರಿಸಿರುವ ಕೇರಳದಲ್ಲಿ ಓಣಂ ಆಚರಣೆಗೆ ಮಂಕು ಕವಿದಿದ್ದು, ಚಿನ್ನದ ಖರೀದಿಗೂ ಜನ ಆಸಕ್ತಿ ತೋರಿಲ್ಲ. ಹೀಗಾಗಿ ಚಿನ್ನಕ್ಕೆ ಬೇಡಿಕೆ ಕುಸಿದಿದೆ.ಈ ನಿಟ್ಟಿನಲ್ಲಿ ಬೆಲೆಯೂ ಕೂಡ ಕಡಿಮೆಯಾಗಿದೆ. 

ಮುಂಬೈ/ಬೆಂಗಳೂರು: ಕೇರಳದಲ್ಲಿ ಸಂಭವಿಸಿದ ಭೀಕರ ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ದೇಶಾದ್ಯಂತ ಚಿನ್ನದ ಬೇಡಿಕೆ ಕುಸಿತಕಂಡಿದೆ. ಸಾಮಾನ್ಯವಾಗಿ ಓಣಂ ಹಬ್ಬದ ಸಂದರ್ಭ ಕೇರಳದಲ್ಲಿ ಚಿನ್ನದ ಖರೀದಿ ಹೆಚ್ಚಾಗುವುದರಿಂದ, ದೇಶದಲ್ಲಿ ಈ ಅವಧಿಯಲ್ಲಿ ಚಿನ್ನದ ಬೆಲೆಯೂ ಹೆಚ್ಚಿರುತಿತ್ತು. ಆದರೆ, ಈ ಬಾರಿ ಪ್ರವಾಹದಿಂದ ತತ್ತರಿಸಿರುವ ಕೇರಳದಲ್ಲಿ ಓಣಂ ಆಚರಣೆಗೆ ಮಂಕು ಕವಿದಿದ್ದು, ಚಿನ್ನದ ಖರೀದಿಗೂ ಜನ ಆಸಕ್ತಿ ತೋರಿಲ್ಲ. ಹೀಗಾಗಿ ಚಿನ್ನಕ್ಕೆ ಬೇಡಿಕೆ ಕುಸಿದಿದೆ.

ಹೀಗಾಗಿ ಬೇಡಿಕೆ ಬಾರಿ ಕುಸಿದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 29,635ಕ್ಕೆ ಇಳಿಕೆಯಾಗಿದ್ದು, ಕಳೆದ ವಾರ ಇದು 29,268ಕ್ಕೆ ಇಳಿಕೆಯಾಗಿತ್ತು. ಇದು ಜನವರಿ 10ರ ಬಳಿಕದ ಅತ್ಯಂತ ಕಡಿಮೆ ಬೆಲೆ.

ನೀರಸ ಓಣಂ: ಕೇರಳಿಗರ ಅತಿದೊಡ್ಡ ಹಬ್ಬ ಓಣಂ ಸಂಭ್ರಮಾಚರಣೆಯ ಮೇಲೆ ಇದೀಗ ಪ್ರವಾಹ ಸಂಕಷ್ಟದ ಕರಿ ಛಾಯೆ ಮೂಡಿದೆ. ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಲ್ಪಡುವ ಹಬ್ಬ ಶನಿವಾರ ನಡೆಯಲಿದ್ದು, ಆಚರಣೆಯ ಉತ್ಸುಕತೆ ಜನರಲ್ಲಿ ಕಂಡುಬರುತ್ತಿಲ್ಲ. ಹೂವು, ಹಣ್ಣು, ದೀಪಗಳ ಖರೀದಿಯ ಭರಾಟೆ ಎಲ್ಲೂ ಕಾಣುತ್ತಿಲ್ಲ. ಕೆಲವರು ಅಬ್ಬರದ ಓಣಂ ಆಚರಣೆಯ ಬದಲು ಅದರ ಹಣವನ್ನು ಸಂತ್ರಸ್ತರ ನಿಧಿಗೆ ನೀಡಲು ಮುಂದಾಗಿದ್ದಾರೆ.