ಐಫೋನ್'ಗಳು ಸೇರಿದಂತೆ ಹಲವು ಫೋನ್'ಗಳ ದರವನ್ನು ಶೇ.10 ಕ್ಕೂ ಹೆಚ್ಚು ರಿಯಾಯಿತಿ ಘೋಷಿಸಿತ್ತು. ಬಿಗ್ ಬಿಲಿಯನ್ ಡೇ ಆಫರ್'ನಲ್ಲಿ ಶೇ. 80 ರಷ್ಟು ಗ್ರಾಹಕರು ಇಎಂಐಯೇತರ, ಹಳೆಯ ಫೋನುಗಳ ಬದಲಾವಣೆ, ಖಾತ್ರಿಯೊಂದಿಗೆ ಬದಲಾವಣೆ ಯೋಜನೆಯಡಿ ಮೊಬೈಲ್ ಖರೀದಿಸಿದ್ದಾರೆ.
ಬೆಂಗಳೂರು(ಸೆ.22): ಇ ಕಾಮರ್ಸ್ ಸಂಸ್ಥೆ ಫ್ಲಿಪ್'ಕಾರ್ಟ್ ಬುಧವಾರ ಆಯೋಜಿಸಿದ್ದ ಬಿಗ್ ಬಿಲಿಯನ್ ಡೇಸ್ ವಿಶೇಷ ರಿಯಾಯಿತಿ ಮಾರಾಟ ಯೋಜನೆಯಡಿ ಕೇವಲ 20 ಗಂಟೆಗಳಲ್ಲಿ 13 ಲಕ್ಷ ಸ್ಮಾರ್ಟ್ ಫೋನ್ ಮಾರಾಟ ಮಾಡಿ ದಾಖಲೆ ಬರೆದಿದೆ.
ಐಫೋನ್'ಗಳು ಸೇರಿದಂತೆ ಹಲವು ಫೋನ್'ಗಳ ದರವನ್ನು ಶೇ.10 ಕ್ಕೂ ಹೆಚ್ಚು ರಿಯಾಯಿತಿ ಘೋಷಿಸಿತ್ತು. ಬಿಗ್ ಬಿಲಿಯನ್ ಡೇ ಆಫರ್'ನಲ್ಲಿ ಶೇ. 80 ರಷ್ಟು ಗ್ರಾಹಕರು ಇಎಂಐಯೇತರ, ಹಳೆಯ ಫೋನುಗಳ ಬದಲಾವಣೆ, ಖಾತ್ರಿಯೊಂದಿಗೆ ಬದಲಾವಣೆ ಯೋಜನೆಯಡಿ ಮೊಬೈಲ್ ಖರೀದಿಸಿದ್ದಾರೆ.
ಬಿಗ್ ಬಿಲಿಯನ್ ಡೇ ಆಫರ್ ಯೋಜನೆ ಸೆ.24 ಭಾನುವಾರದವರೆಗೂ ಮುಂದುವರಿಯಲಿದ್ದು ಫೋನ್'ಗಳ ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೂ ರಿಯಾಯಿತಿ ನೀಡಲಾಗಿದೆ. ದಸರಾ ಹಬ್ಬದ ಹಿನ್ನಲೆಯಲ್ಲಿ ಅಮೆಜಾನ್ ಸೇರಿದಂತೆ ಹಲವು ಇ ಕಾಮರ್ಸ್ ಸಂಸ್ಥೆಗಳು ವಿಶೇಷ ಆಫರ್ ಘೋಷಿಸಿವೆ. ಪ್ರತಿಷ್ಠಿತ ಎಲೆಕ್ಟ್ರಾನಿಕ್ ಹಾಗೂ ಮೊಬೈಲ್ ಅಂಗಡಿಗಳು ಸಹ ಆಫರ್'ಗಳನ್ನು ಘೋಷಿಸಿವೆ.