ಬೆಂಗಳೂರು [ಸೆ.15]:  ಆಫ್ರಿಕಾದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ‘ಇಥಿಯೋಪಿಯಾ ಏರ್‌ಲೈನ್ಸ್‌’ ಮತ್ತು ಸ್ಕೈಟ್ರಾಕ್ಸ್‌ ಮಾನ್ಯತೆ ಪಡೆದಿರುವ ಜಾಗತಿಕ ವಾಯುಯಾನ ಸಂಸ್ಥೆ ‘ಪೋರ್‌ ಸ್ಟಾರ್‌ ಏರ್‌ಲೈನ್ಸ್‌’ ಆಫ್ರಿಕಾ ಖಂಡ ಇಥಿಯೋಪಿಯಾದ ದೇಶದ ರಾಜಧಾನಿ ಅಡಿಸ್‌ ಅಬಾಬಾದಿಂದ ಬೆಂಗಳೂರು ನಗರಕ್ಕೆ ನಾಗರಿಕ ವಿಮಾನಯಾನ ಸೇವೆ ಕಲ್ಪಿಸಲು ಮುಂದಾಗಿದೆ.

ಭಾರತಕ್ಕೆ ವಿಮಾನ ಸೇವೆ ವಿಸ್ತರಿಸುವ ಉದ್ದೇಶದಿಂದ ಅ.27ರಿಂದ ಆಫ್ರಿಕಾದಿಂದ ಬೆಂಗಳೂರಿಗೆ ನಾಗರಿಕ ಮಾನಯಾನ ಸೇವೆ ಪ್ರಾರಂಭಿಸಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಇಥಿಯೋಪಿಯಾ ಏರ್‌ಲೈನ್ಸ್‌ನ ಉಪಖಂಡದ ಪ್ರಾದೇಶಿಕ ನಿರ್ದೇಶಕ ತದೇಸ್‌್ಸ ಟಿಲಹುನ್‌ ಮಾತನಾಡಿ, ಕಳೆದ 40 ವರ್ಷಗಳಿಂದ ನಿರಂತರವಾಗಿ ಆಫ್ರಿಕಾದಿಂದ ಮುಂಬೈಗೆ ವಿಮಾನ ಸೇವೆ ಒದಗಿಸಲಾಗುತ್ತಿದೆ. ಈಗ ಬೆಂಗಳೂರು ನಗರಕ್ಕೂ ಸೇವೆ ಕಲ್ಪಿಸಲಾಗುತ್ತಿದೆ ಎಂದರು.

ಹೆಚ್ಚುನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು ಮಾಹಿತಿ, ಜೈವಿಕ ತಂತ್ರಜ್ಞಾನವಷ್ಟೇ ಅಲ್ಲದೆ ಬಯೋ ತಂತ್ರಜ್ಞಾನ ಕ್ಲಸ್ಟರ್‌ ಆಗಿಯೂ ಜಗತ್ತಿನ ಗಮನ ಸೆಳೆದಿದೆ. ಇಂಥ ನಗರವನ್ನು ಸಂಪರ್ಕಿಸಲು ವಾರದಲ್ಲಿ ನಾಲ್ಕು ದಿನಗಳ ಕಾಲ ನೇರ ವಿಮಾನ ಸೇವೆ ಸಿಗಲಿದೆ. ಅ.27ರಿಂದ ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಇಥಿಯೋಪಿಯಾದಿಂದ ವಿಮಾನಗಳು ಹೊರಡಲಿವೆ. ಇನ್ನು ಬೆಂಗಳೂರಿನಿಂದ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ವಿಮಾನ ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಮುಂಬೈ ಮತ್ತು ದೆಹಲಿ ನಡುವೆ ದಿನನಿತ್ಯ ಎರಡು ವಿಮಾನಗಳು ಹಾರಾಡುತ್ತಿವೆ. ಬೆಂಗಳೂರು, ಅಹಮದಾಬಾದ್‌, ಚೆನ್ನೈ, ಮುಂಬೈ, ನವದೆಹಲಿ ನಡುವೆ ಕಾರ್ಗೋ ಸೇವೆ ಲಭ್ಯವಿದೆ. ದಕ್ಷಿಣ ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳನ್ನು ಹೊರತು ಪಡಿಸಿ, ಜಗತ್ತಿನ ವಿವಿಧೆಡೆಗಳಿಗೆ ವಿಮಾನ ಸೇವೆಗೆ ವ್ಯಾಪಕ ಬೇಡಿಕೆ ಕಂಡು ಬಂದಿದೆ. ಆಫ್ರಿಕಾದಿಂದ ಬೆಂಗಳೂರಿಗೆ ಆರಂಭಿಸುತ್ತಿರುವ ವಿಮಾನ ಸೇವೆ ತಡೆರಹಿತವಾಗಿದ್ದು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.