ನೋಡ ನೋಡುತ್ತಿದ್ದಂತೆಯೇ ನದಿಯಲ್ಲಿ ತೇಲಿ ಹೋಯ್ತು 5 ಮಹಡಿ ಕಟ್ಟಡ| ವಿಡಿಯೋ ನೋಡಿದವರಿಗೂ ಭಾರೀ ಅಚ್ಚರಿ| ಹೀಗೂ ಸಾಧ್ಯನಾ ಎಂದವರಿಗೆ ಟ್ವಿಟರ್ ಬಳಕೆದಾರರೇ ನೀಡಿದ್ರು ಉತ್ತರ| ಇಲ್ಲಿದೆ ನೋಡಿ ಅಪರೂಪದ ವಿಡಿಯೋ

ಬೀಜಿಂಗ್[ಆ.01]: ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದರಂತೆ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್ ಆಘುತ್ತವೆ. ಇವುಗಳನ್ನು ನೊಡಿದರೆ ಜಗತ್ತಿನಲ್ಲಿ ಹೀಗೂ ನಡೆಯುತ್ತಾ? ಎಂದು ನಂಬುವುದೂ ಅಸಾಧ್ಯ. ಸದ್ಯ ಟ್ವಿಟರ್ ನಲ್ಲಿ ಅಚ್ಚರಿ ಹಾಗೂ ಬೆಚ್ಚಿ ಬೀಳಿಸುವ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ನದಿಯಲ್ಲಿ ಐದು ಮಹಡಿಯ ಕಟ್ಟಡವೊಂದು ತೇಲಿ ಹೋಗುತ್ತಿರುವ ದೃಶ್ಯ ಇದಾಗಿದ್ದು, ನೊಡುಗರೆಲ್ಲಾ ಭಾರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದು ಚೀನಾದಲ್ಲಿ ನಡೆದ ಘಟನೆ ಎನ್ನಲಾಗಿದ್ದು, ಸಮುದ್ರದಲ್ಲಿ ಹಡಗು ಹೋಗುವಂತೆ ಇಲ್ಲಿ ನದಿಯಲ್ಲಿ ಕಟ್ಟಡವೊಂದು ತೇಲಿ ಹೋಗುತ್ತಿದೆ. ಈ ವಿಡಿಯೋ ಶೇರ್ ಮಾಡಿರುವ ವ್ಯಕ್ತಿ 'ಇಂತಹ ವಿಚಿತ್ರ ಘಟನೆಗಳು ಚೀನಾದಲ್ಲಷ್ಟೇ ಸಂಭವಿಸಲು ಸಾಧ್ಯ. ಇಲ್ಲಿನ ಯೆಂಗ್ಜೀ ನದಿಯಲ್ಲಿ 5 ಮಹಡಿಯ ಕಟ್ಟಡ ತೇಲಿ ಹೋಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

Scroll to load tweet…

ಆದರೆ ಇದು ಸಾಧ್ಯನಾ? ಎನ್ನುವ ಪ್ರಶ್ನೆ ಕೇಳುವ ಮುನ್ನ, ಇದೊಂದು ಫ್ಲೋಟಿಂಗ್ ರೆಸ್ಟೋರೆಂಟ್ ಆಗಿದ್ದು, ಇದನ್ನು ಸ್ಥಳಾಂತರಿಸುವ ಪ್ರಕ್ರಿಯೆ ವೇಳೆ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂಬುವುದು ವಾಸ್ತವ. ಇದನ್ನು ಮತ್ತೊಬ್ಬ ಟ್ವಿಟರ್ ಬಳಕೆದಾರರು ಸ್ಪಷ್ಟಪಡಿಸಿದ್ದಾರೆ. ಹಡಗಿನ ಸಹಾದಿಂದ ಇದನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಚೀನಾ ಮಾಧ್ಯಮಗಳು ಈ ಕುರಿತಾಗಿ ವರದಿ ಮಾಡಿದ್ದು,'ಇಂಪ್ರೆಷನ್ ಜಿಯಾಗ್ಜಿನ್ ರೆಸ್ಟೋರೆಂಟ್ ನಿಂದಾಗಿ ಯೆಂಗ್ಜೀ ನದಿ ಕಲುಷಿತಗೊಳ್ಳುತ್ತಿತ್ತು. ಹೀಗಾಗಿ ಇದನ್ನು ಸ್ಥಳಾಂತರಿಸಲಾಗಿದೆ' ಎಂದಿವೆ.