ಉತ್ತರಖಂಡ, ಗೋವಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಉತ್ತರಪ್ರದೇಶ ರಾಜ್ಯದಲ್ಲಿ   ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ. ಈಶಾನ್ಯ ಭಾಗದ ಮಣಿಪುರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ . ಆದರೆ ಪಂಜಾಬ್‌ನಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದ್ದು ಕಾಂಗ್ರೆಸ್ ಅಧಿಕಾರ ಹಿಡಿಯುವ ಲಕ್ಷಣಗಳಿವೆ ಎಂದು ಸಮೀಕ್ಷೆಗಳು ತಿಳಿಸಿವೆ.

ನವದೆಹಲಿ(ಮಾ.09): ಭಾರೀ ನಿರೀಕ್ಷೆ ಹುಟ್ಟಹಾಕಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾನೋತ್ತರ ಸಮೀಕ್ಷೆಗಳ ವಿಶ್ಲೇಷಣೆ ಪ್ರಕಾರ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ.

ಉತ್ತರಖಂಡ, ಗೋವಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಉತ್ತರಪ್ರದೇಶ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ. ಈಶಾನ್ಯ ಭಾಗದ ಮಣಿಪುರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ಪಂಜಾಬ್‌ನಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದ್ದು ಕಾಂಗ್ರೆಸ್ ಅಧಿಕಾರ ಹಿಡಿಯುವ ಲಕ್ಷಣಗಳಿವೆ ಎಂದು ಸಮೀಕ್ಷೆಗಳು ತಿಳಿಸಿವೆ. ಎಬಿಪಿ, ಲೋಕನೀತಿ, ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ, ನ್ಯೂಸ್‌ 18, ಇಂಡಿಯಾ ಟುಡೆ ಸಂಸ್ಥೆಗಳು ಚುನಾವಣೆ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆ ನಡೆಸಿದ್ದವು.

ಉತ್ತರ ಪ್ರದೇಶ

ಪಕ್ಷ - ಸಿಎಸ್‌ಡಿಎಸ್‌ ಸಮೀಕ್ಷೆ - ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ - ನ್ಯೂಸ್‌ 18 ಸಮೀಕ್ಷೆ ಇಂಡಿಯಾ ಟುಡೆ ಸಮೀಕ್ಷೆ

ಎಸ್‌ಪಿ - 192 173 181 130

ಬಿಜೆಪಿ - 123 185 198 170

ಬಿಎಸ್‌ಪಿ- 80 95 80 90

ಕಾಂಗ್ರೆಸ್ - 19 18 15 12

ಇತರೆ -00 6 12 00

ಕುತೂಹಲ ಕೆರಳಿಸಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ ಎಂದು ಎಬಿಪಿ, ಲೋಕನೀತಿ, ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ ಸಂಸ್ಥೆಗಳು ತಿಳಿಸಿವೆ. ಆದರೆ ನ್ಯೂಸ್‌ 18, ಇಂಡಿಯಾ ಟುಡೆ ಸಂಸ್ಥೆಗಳು ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಹೇಳಿವೆ. ಎಬಿಪಿ, ಲೋಕನೀತಿ, ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಮತ್ತೆ ಸಮಾಜವಾದಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಉತ್ತರಪ್ರದೇಶ ರಾಜ್ಯದಲ್ಲಿ 404 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 203 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

ಉತ್ತರಾಖಂಡ

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ

ಬಿಜೆಪಿ 36 42 40

ಕಾಂಗ್ರೆಸ್ 25 28 26

ಇತರೆ 09 00 04

ಉತ್ತರಾಖಂಡ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ, ನ್ಯೂಸ್‌ 18 ಸಮೀಕ್ಷೆಯ ಪ್ರಕಾರ ಬಿಜೆಪಿ ನಿಚ್ಚಳ ಬಹುಮತ ಪಡೆಯಲಿದೆ. ಬಿಜೆಪಿ 40 ರಿಂದ 42 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್‌ 25 ರಿಂದ 26 ಸ್ಥಾನಗಳನ್ನು ಗೆಲ್ಲಲಿದೆ. ಉತ್ತರಾಖಂಡದಲ್ಲಿ 70 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 36 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ.

ಗೋವಾ

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ

ಬಿಜೆಪಿ 25 24 26

ಕಾಂಗ್ರೆಸ್ 12 14 16

ಎಎಪಿ 03 04 02

ಸಣ್ಣ ರಾಜ್ಯ ಗೋವಾದಲ್ಲೂ ಸಹ ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲಲಿದ್ದು , ಎಎಪಿ 3 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಗೋವಾ ರಾಜ್ಯದಲ್ಲಿ 40 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 21 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

ಮಣಿಪುರ

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ

ಬಿಜೆಪಿ 23 22 23

ಕಾಂಗ್ರೆಸ್ 19 17 16

ಇತರೆ 18 20 21

ಈಶಾನ್ಯ ಭಾರತದ ಚಿಕ್ಕ ರಾಜ್ಯ ಮಣಿಪುರದಲ್ಲಿ ಈ ಸಲ ಕೇಸರಿ ಬಾವುಟ ಹಾರಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 19 ಸ್ಥಾನಗಳನ್ನು ಪಡೆಯಲಿದ್ದು ಟಿಎಂಸಿ ಮತ್ತು ಇತರರು 18 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಮಣಿಪುರ ರಾಜ್ಯದಲ್ಲಿ 60 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 31 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

ಪಂಜಾಬ್‌

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ

ಬಿಜೆಪಿ-ಅಕಾಲಿದಳ 16 20 18

ಕಾಂಗ್ರೆಸ್ 58 59 62

ಎಎಪಿ 35 40 38

ಪಂಜಾಬ್‌ ರಾಜ್ಯದಲ್ಲಿ ಬಿಜೆಪಿ ಮತ್ತು ಅಕಾಲಿ ದಳ ಮೈತ್ರಿಕೂಟಕ್ಕೆ ಭಾರೀ ಹಿನ್ನೆಡೆಯಾಗಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಕಾಂಗ್ರೆಸ್‌ ಪಕ್ಷ ಪಂಜಾಬ್‌ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಲಿದೆ. ಸಮೀಕ್ಷೆಗಳ ಪ್ರಕಾರ ಬಿಜೆಪಿ ಕೇವಲ 15 ರಿಂದ 20 ಸ್ಥಾನಗಳನ್ನು ಪಡೆಯಲಿದೆ ಎನ್ನಲಾಗಿದೆ.

ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಕಾಂಗ್ರಸ್‌ 58 ರಿಂದ 65 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಎಪಿ ಉತ್ತಮ ಸಾಧನೆ ಮಾಡಲಿದ್ದು 35 ರಿಂದ 40 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿವೆ .ಪಂಜಾಬ್‌ ರಾಜ್ಯದಲ್ಲಿ 117 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 59 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

ಒಟ್ಟಾರೆ ಸಮೀಕ್ಷೆಗಳ ಪ್ರಕಾರ ಉತ್ತರಪ್ರದೇಶ, ಪಂಜಾಬ್‌ ಮತ್ತು ಮಣಿಪುರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ.

-

ನ್ಯೂಸ್ ಬ್ಯೂರೊ, ಸುವರ್ಣ ನ್ಯೂಸ್