ಬೆಂಗಳೂರು [ಜು.13] : ರಾಜ್ಯ ರಾಜಕೀಯದ ಪ್ರಹಸನ ಮುಂದುವರಿದಿದೆ. 10 ಮಂದಿ ಮಂದಿ ಅತೃಪ್ತ ಶಾಸಕರ ಜೊತೆಗೆ ಮತ್ತೆ ಐವರು ಸೇರ್ಪಡೆಯಾಗಿದ್ದಾರೆ. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ 10 ಮಂದಿ ಶಾಸಕರ ಜೊತೆಗೆ ತಮ್ಮನ್ನೂ ಕೂಡ ಪರಿಗಣಿಸುವಂತೆ ಐವರು ಶಾಸಕರು ಅರ್ಜಿ ಸಲ್ಲಿಸಿದ್ದಾರೆ.

ಈ ಪಟ್ಟಿಯಲ್ಲಿ ಹೊಸದಾಗಿ ಶಿವಾಜಿನಗರ ಶಾಸಕ ರೋಷನ್ ಬೇಗ್, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಹೊಸಕೋಟೆ ಎಂಟಿಬಿ ನಾಗರಾಜ್, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ವಿಜಯಪುರ ಶಾಸಕ ಆನಂದ್ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.  

ರಾಜೀನಾಮೆ ನೀಡಿದರೂ ಬೇಕೆಂದೇ ವಿಳಂಬ ಮಾಡುತ್ತಿದ್ದಾರೆ ಮಾಡಲಾಗುತ್ತಿದೆ. ರಾಜೀನಾಮೆ ಹಿಂಪಡೆಯುವಂತೆ ಸ್ಪೀಕರ್ ಒತ್ತಡ ಹೇರುತ್ತಿದ್ದಾರೆ ಎಂದು ಅಫಿಡವಿಟ್ ನಲ್ಲಿ ಸ್ಪೀಕರ್ ವಿರುದ್ಧ ನೇರ ಆರೋಪ ಮಾಡಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ  

ರಾಜೀನಾಮೆ ನೀಡುವ ಮೂಲಭೂತ ಹಕ್ಕನ್ನು ಕಿತ್ತುಕೊಂಡಿದ್ದಾರೆ.  ರಾಜೀನಾಮೆ ನೀಡಲು ಸರ್ಕಾರದ ದುರಾಡಳಿತ, ಭ್ರಷ್ಟಾಚಾರಗಳೇ ಕಾರಣ. ಇದೇ ಕಾರಣಕ್ಕಾಗಿ ಉಳಿದವರು ರಾಜೀನಾಮೆ ನೀಡಿದ್ದಾರೆ ಎಂದು  ದಾಖಲೆ ಸಹಿತ ಸರ್ಕಾರದ ವಿರುದ್ಧ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. 

ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಸರ್ಕಾರ ಉಳಿಸಿಕೊಳ್ಳಲು ವಾಮಮಾರ್ಗ ಹಿಡಿದಿದ್ದಾರೆ. ಈ ದುರಾಡಳಿತಕ್ಕೆ ಸುಪ್ರೀಂ ಕೊನೆ ಹಾಡಲು ಆದೇಶಿಸಬೇಕು ಎಂದು ಐವರು ಶಾಸಕರು ವೈಯಕ್ತಿಕವಾಗಿ ಅಫಿಡವಿಟ್ ಸಲ್ಲಿಸಿದ್ದಾರೆ.

"