ಉತ್ತರ ಕನ್ನಡದಲ್ಲಿ ಭಾರಿ ಮಳೆ: ಐವರು ನೀರು ಪಾಲು
ಉತ್ತರ ಕನ್ನಡ(ಸೆ.17): ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕಾರವಾರ ತಾಲೂಕಿನ ಚೆಂಡಿಯಾದ ನಾಗರಮಡಿ ಫಾಲ್ಸ್ನಲ್ಲಿ ಐವರು ನೀರು ಪಾಲಾಗಿದ್ದಾರೆ.
ಮೃತರು ಗೋವಾ ಮೂಲದವರಾಗಿದ್ದು, ನಾಗರಮಡಿ ಫಾಲ್ಸ್'ಗೆ ಪ್ರವಾಸಕ್ಕೆ ಬಂದಿದ್ದಾಗ ದುರಂತ ಸಂಭವಿಸಿದೆ. ಏಕಾಏಕಿ ನೀರು ಹರಿದು ಬಂದ ಕಾರಣದಿಂದ ಐವರು ಕೊಚ್ಚಿ ಹೋಗಿದ್ದಾರೆ. ಮಹಿಳೆಯ ಶವ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.
