ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಜೀವಂತ ಹೃದಯ ರವಾನೆಯಾಗಿದೆ. ಇದೇ ಮೊದಲ ‌ಬಾರಿಗೆ ಏರ್ ಆ್ಯಂಬುಲೆನ್ಸ್ ಮೂಲಕ ‌ಹೃದಯ ರವಾನೆಯಾಗಿದ್ದು, ಬನ್ನೇರುಘಟ್ಟ ಅಪೋಲೊ ಆಸ್ಪತ್ರೆಯಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಹೆಲಿಕ್ಯಾಪ್ಟರ್ ಮೂಲಕ ಕೆಲವೇ ನಿಮಿಷಗಳಲ್ಲಿ ರವಾನೆಯಾಗಿದೆ.

ಬೆಂಗಳೂರು (ಫೆ.23): ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಜೀವಂತ ಹೃದಯ ರವಾನೆಯಾಗಿದೆ. ಇದೇ ಮೊದಲ ‌ಬಾರಿಗೆ ಏರ್ ಆ್ಯಂಬುಲೆನ್ಸ್ ಮೂಲಕ ‌ಹೃದಯ ರವಾನೆಯಾಗಿದ್ದು, ಬನ್ನೇರುಘಟ್ಟ ಅಪೋಲೊ ಆಸ್ಪತ್ರೆಯಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಹೆಲಿಕ್ಯಾಪ್ಟರ್ ಮೂಲಕ ಕೆಲವೇ ನಿಮಿಷಗಳಲ್ಲಿ ರವಾನೆಯಾಗಿದೆ.

ಆಂಧ್ರ ಪ್ರದೇಶ ಮೂಲದ 51 ವರ್ಷ ಮಹಿಳೆ ಡೈಲೇಟೆಡ್ ಕಾರ್ಡಿಯೋಮಯೋಪತಿ ಎಂಬ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಏವಿಯೇಟರರ್ಸ್ ಏರ್ ರೆಸ್ಕ್ಯೂ ಆಂಬುಲೆನ್ಸ್ ಮೂಲಕ ಸಂಜೆ 6 ಗಂಟೆಗೆ ಹೃದಯ ರವಾನೆ ಮಾಡಲಾಗಿದೆ. ಎಂ.ಎಸ್ ರಾಮಯ್ಯ ಆಸ್ಪತ್ರೆ ಹಿರಿಯ ಹೃದಯ ತಜ್ಞ ಡಾ. ನಾಗಮಲೇಶ್, ಹೃದಯ ಶಸ್ತ್ರಚಿಕಿತ್ಸಾ ತಜ್ಞ ಜೂಲಿಯಸ್ ಪೊನ್ನನ್, ಡಾ. ರವಿಶಂಕರ್ ಶೆಟ್ಟಿ, ಅರವಳಿಕೆ ತಜ್ಞ ಡಾ. ರವಿನಾಯಕ್, ಡಾ. ಶಿಲ್ಪಾ ಇವರಿಂದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.