ಬೆಂಗಳೂರು[ಅ.08]: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠದ ಬಳಿ 72 ವರ್ಷಗಳ ಬಳಿಕ ಮೊದಲ ಬಾರಿ ಶಾರದಾ ಪೂಜೆ ನಡೆದಿದೆ. ಹಾಂಕಾಂಗ್ ಮೂಲದ ಭಾರತೀಯ ಸಂಜಾತ ಹಿಂದೂ ದಂಪತಿಗಳು ಈ ಪೂಜೆ ನೆರವೇರಿಸಿದ್ದಾರೆ. 

ಭಾರತಕ್ಕೆ ಹೋಗಬೇಡಿ: ಪಿಒಕೆ ನಾಗರಿಕರಿಗೆ ಇಮ್ರಾನ್‌ ಎಚ್ಚರಿಕೆ!

ಹೌದು ಶಂಕರಾಚಾರ್ಯರು ಕಾಶ್ಮೀರದಲ್ಲಿ ಸ್ಥಾಪಿಸಿದ್ದ ಶಾರದಾ ಪೀಠದಲ್ಲಿ ಹಲವಾರು ವರ್ಷಗಳಿಂದ ಪೂಜೆಯೇ ನಡೆದಿಲ್ಲ. ಹೀಗಿರುವಾಗ ಬರೋಬ್ಬರಿ 72 ವರ್ಷಗಳ ಬಳಿಕ ಅಲ್ಲಿ ಶಾರದಾ ಪೂಜೆ ನಡೆದಿದೆ. ಪೀಠದ ಬಳಿ ಇರುವ ಕಿಶನ್ ಗಂಗಾ ನದಿ ದಂಡೆಯ ಮೇಲೆ, ಶಾರದಾ ರಕ್ಷಣಾ ಸಮಿತಿಯ ಸಹಯೋಗದೊಂದಿಗೆ ಈ ಪೂಜೆ ನಡೆದಿದೆ.

ಪ್ರಧಾನಿ ಅಮೆರಿಕ ಪ್ರವಾಸ: ಭಾರತದ ಭವಿಷ್ಯಕ್ಕೆ ಮೋದಿ ವಿಶ್ವಾಸ!

ಹಾಂಕಾಂಗ್ ನ ವೆಂಕಟರಮಣ ಮತ್ತು ಸುಜಾತಾ ದಂಪತಿ ಶಾರದಾ ಪೀಠದಲ್ಲಿ ಪೂಜೆ ಸಲ್ಲಿಸುವ ಸಲುವಾಗಿಯೇ ಅಧಿಕೃತ ವೀಸಾ ಪಡೆದು ಮುಜಫರಾಬಾದ್ ಗೆ ತೆರಳಿದ್ದರು. ಆದರೆ ಶಾರದಾ ಪೀಠಕ್ಕೆ ತೆರಳಲು NOC ಸಿಕ್ಕಿರಲಿಲ್ಲ. ಹೀಗಿರುವಾಗ ಪಾಕಿಸ್ತಾನದ ಸಿವಿಲ್ ಸೊಸೈಟಿ ಸದಸ್ಯರು ಆಡಳಿತ ಸಿಬ್ಬಂದಿ ಬಳಿ ಮನವಿ ಮಾಡಿಕೊಂಡು ಶಾರದಾ ಪೀಠಕ್ಕೆ ತೆರಳಲು ಅನುಮತಿ ಕೊಡಿಸಿದ್ದರು. ಆದರೆ ಪೀಠದಲ್ಲೇ ಪೂಜೆ ನಡೆಸಲು ಅವಕಾಶ ಕೊಡಲಿಲ್ಲ. ಈ ಕಾರಣದಿಂದ ಪೀಠದ ಬಳಿ ಇರುವ ನದಿ ದಂಡೆಯಲ್ಲಿ ದಂಪತಿ ಪೂಜೆ ನೆರವೇರಿಸಿದ್ದಾರೆ.

ಸದ್ಯ ಈ ದಂಪತಿ ಶಾರದಾ ಪೂಜೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಅಗುತ್ತಿದ್ದು, ಭಾರತೀಯರಿಗೆ ಸಂತಸ ಕೊಟ್ಟಿದೆ.