ನವದೆಹಲಿ [ಸೆ.06]: ದೆಹಲಿ ಮತ್ತು ಲಖನೌ ನಡುವೆ ಪ್ರಸ್ತಾಪಿತ ದೇಶದ ಮೊದಲ ಖಾಸಗಿ ರೈಲಿನ ಸಂಚಾರ ಅ. 4 ರಂದು ಆರಂಭವಾಗಲಿದೆ.

ರೈಲ್ವೆಗೆ ಸೇರಿದ ಐಆರ್ ಸಿಟಿಸಿ ನಿರ್ವಹಣೆ ಮಾಡಲಿರುವ ಈ ರೈಲು ಗುರವಾರ ಹೊರತುಪಡಿಸಿ ಉಳಿದೆಲ್ಲಾ ದಿನ ಸಂಚರಿಸಲಿದೆ. ಆರಂಭಿಕ ಸಂಚಾರ ಹಾಗೂ ಸೇವೆಯ ಬಳಿಕ ಐಆರ್‌ಸಿಟಿಸಿ ನಂತರದ ದಿನಗಳಲ್ಲಿ ಈ ರೈಲಿನ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸಲಿದೆ.

ಬೆಳಗಾವಿ-ಗೋವಾ ವಿಶೇಷ ರೈಲಿಗೆ ಚಾಲನೆ

ತೇಜಸ್ ಎಕ್ಸ್‌ಪ್ರೆಸ್ ಅನ್ನು ಖಾಸಗಿಯವರಿಗೆ ವಹಿಸಿದ್ದರೂ ಭಾರತೀಯ ರೈಲ್ವೆ ಚಾಲಕರು, ಗಾರ್ಡ್‌ಗಳನ್ನು ಮತ್ತು ರೈಲ್ವೆ ರಕ್ಷಣಾ ಪಡೆಯನ್ನು ಒದಗಿಸಲಿದೆ. ರೈಲಿನ ನಿರ್ವಹಣೆ ಹಾಗೂ ಕ್ಯಾಟರಿಂಗ್ ಸೇವೆ ಐಆರ್‌ಸಿಟಿಸಿ ನಿರ್ವಹಿಸಲಿದೆ.