Asianet Suvarna News Asianet Suvarna News

ಮೋದಿ 2.0 ಮೊದಲ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್..!

ಕೇಂದ್ರದಲ್ಲಿ ನರೇಂದ್ರ ಮೋದಿ ಅವರ 2ನೇ ಶಕೆ ಆರಂಭವಾಗಿದ್ದು, ಮೊದಲನೇ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು [ಶುಕ್ರವಾರ] ನಡೆದ ಮೊದಲ ಸಂಪುಟ ಸಭೆಯಲ್ಲಿ  ಈ ನಿರ್ಧಾರ ಕೈಗೊಳ್ಳಲಾಗಿದೆ.

First Parliament Session Of NDA-2 Government From June 17 To July 26
Author
Bengaluru, First Published May 31, 2019, 9:24 PM IST

ನವದೆಹಲಿ, [ಮೇ.31]: ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು [ಶುಕ್ರವಾರ] ನಡೆದ ಮೊದಲ ಸಂಪುಟ ಸಭೆಯಲ್ಲಿ ಸಂಸತ್ ಅಧಿವೇಶನ ನಡೆಸುವ ದಿನಾಂಕ ನಿಗದಿ ಸೇರಿದಂತೆ ವಿವಿಧ ತೀರ್ಮಾನ ಕೈಗೊಳ್ಳಲಾಗಿದೆ.

ಜೂನ್ 17 ರಿಂದ ಜುಲೈ 26 ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಜೂನ್ 19 ರಂದು ಲೋಕಸಭೆಗೆ ಹೊಸ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಜೂನ್ 20 ರಂದು ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ.

ಜೂನ್ 17 ರಿಂದ ಜುಲೈ 26 ರವರೆಗೆ 40 ದಿನಗಳ ಕಾಲ ಸಂಸತ್ ಅಧಿವೇಶನ ನಡೆಯಲಿದ್ದು, ಜುಲೈ 5 ರಂದು ಬಜೆಟ್ ಮಂಡನೆಗೆ ನಿರ್ಧರಿಸಲಾಗಿದೆ. ಜುಲೈ 5 ರಂದು ನೂತನ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

ನಿನ್ನೆಯಷ್ಟೇ 2ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮುಖ್ಯಾಂಶಗಳು
* ಜುಲೈ 5ರಂದು ಸಂಸತ್ ನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆ
* ಜೂನ್ 19ರಂದು ಲೋಕಸಭಾ ಸ್ಪೀಕರ್ ಆಯ್ಕೆಗೆ ಚುನಾವಣೆ
* ಜೂನ್ 20ರಂದು ಬಜೆಟ್ ಅಧಿವೇಶನ ಕುರಿತು ರಾಷ್ಟ್ರಪತಿ ಭಾಷಣ
* ಜೂನ್ 17ರಿಂದ ಸಂಸತ್ ಬಜೆಟ್ ಅಧಿವೇಶನ
* ಜೂನ್ 17ರಿಂದ ಸಂಸತ್ ನಲ್ಲಿ ಬಜೆಟ್ ಮೇಲಿನ ಅಧಿವೇಶನ
* ಜುಲೈ 26ರವರೆಗೂ ನಡೆಯಲಿರುವ ಸಂಸತ್ ಬಜೆಟ್ ಅಧಿವೇಶನ

Follow Us:
Download App:
  • android
  • ios