ಬಿಎಸ್'ಎಫ್'ಗೆ ಮೊದಲ ಕನ್ನಡತಿ ಅಧಿಕಾರಿ : ದಕ್ಷಿಣ ಭಾರತದ ಏಕೈಕ ಮಹಿಳೆ

First Published 30, Mar 2018, 7:35 AM IST
First BSF Kannada Women Officer
Highlights

ಈ ಮೂಲಕ ದಕ್ಷಿಣ ಭಾರತದಲ್ಲೇ ಬಿಎಸ್‌ಎಫ್‌ಗೆ ಸೇರ್ಪಡೆಯಾದ ಮೊದಲ ಮಹಿಳೆ ಎನಿಸಿದ್ದಾರೆ. ಬಿಎಸ್‌ಎಫ್‌ನಲ್ಲಿ 2013ರ ಬ್ಯಾಚ್'ನಲ್ಲಿ ರಾಜಸ್ಥಾನದ ಮಹಿಳೆಯೊಬ್ಬರು ಆಯ್ಕೆಯಾಗಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಪಂಜಾಬ್ ಪ್ರಾಂತ್ಯದಲ್ಲಿ ನೇಮಕಗೊಂಡಿದ್ದರು.

ಮಂಗಳೂರು(ಮಾ.30): ಭಾರತೀಯ ಗಡಿಭ ಭದ್ರತಾ ಪಡೆಗೆ ಆಯ್ಕೆಯಾಗಿದ ದಕ್ಷಿಣ ಭಾರತದ ಏಕೈಕ ಮಹಿಳೆ, ಕನ್ನಡತಿ,  ದ.ಕ.ಜಿಲ್ಲೆಯ ಪುತ್ತೂರಿನ ಸ್ಫೂರ್ತಿ ಭಟ್ ಈಗ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಭಾರತೀಯ ಗಡಿಭದ್ರತಾ ಪಡೆ(ಬಿಎಸ್‌ಎಫ್)ಗೆ ಆಯ್ಕೆಯಾಗಿದ್ದ ದಕ್ಷಿಣ ಭಾರತದ ಏಕೈಕ ಮಹಿಳೆ, ಕನ್ನಡತಿ, ದ.ಕ.ಜಿಲ್ಲೆಯ ಪುತ್ತೂರಿನ ಸ್ಫೂರ್ತಿ ಭಟ್ ಈಗ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಒಂದು ವರ್ಷದ ತರಬೇತಿಯನ್ನು ಮುಕ್ತಾಯಗೊಳಿಸಿದ ಬಳಿಕ ಸ್ಫೂರ್ತಿ ಭಟ್ ಅವರನ್ನು ಪಂಜಾಬಿನ ಗುರುದಾಸ್‌ಪುರ್ ಜಿಲ್ಲೆಗೆ ಬಿಎಸ್‌ಎಫ್‌ನ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನೇಮಕಗೊಳಿಸಲಾಗಿದೆ. ಭಾರತೀಯ ಗಡಿ ಭದ್ರತಾ ಸೈನ್ಯದಲ್ಲಿ ಈಕೆ ಪಾಕ್ ಗಡಿಯ ಸರಹದ್ದಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ಮೂಲಕ ದಕ್ಷಿಣ ಭಾರತದಲ್ಲೇ ಬಿಎಸ್‌ಎಫ್‌ಗೆ ಸೇರ್ಪಡೆಯಾದ ಮೊದಲ ಮಹಿಳೆ ಎನಿಸಿದ್ದಾರೆ. ಬಿಎಸ್‌ಎಫ್‌ನಲ್ಲಿ 2013ರ ಬ್ಯಾಚ್'ನಲ್ಲಿ ರಾಜಸ್ಥಾನದ ಮಹಿಳೆಯೊಬ್ಬರು ಆಯ್ಕೆಯಾಗಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಪಂಜಾಬ್ ಪ್ರಾಂತ್ಯದಲ್ಲಿ ನೇಮಕಗೊಂಡಿದ್ದರು. ಸ್ಫೂರ್ತಿ ಭಟ್ ಬಿಎಸ್‌ಎಫ್‌ನಲ್ಲಿ ನೇಮಕಗೊಂಡ ಎರಡನೇ ಮಹಿಳೆ. ಮೂಲತಃ ಪುತ್ತೂರಿನ ಉಪ್ಪಿನಂಗಡಿ ಬಳಿಯ ನಿವಾಸಿಯಾದ ಸ್ಫೂರ್ತಿ ಭಟ್ ಅವರ ತಂದೆ ಕೆ.ಬಾಲಸುಬ್ರಹ್ಮಣ್ಯ ಭಟ್ ಅವರು ಕೇಂದ್ರ

ಸರ್ಕಾರದ ನಿವೃತ್ತ ಅಧಿಕಾರಿ. ತರಬೇತಿ ಅವಧಿಯಲ್ಲಿ ಸ್ಫೂರ್ತಿ ಭಟ್ ವಿವಾಹವಾಗಿದ್ದು, ಪತಿ ಶ್ಯಾಮಕೃಷ್ಣ ಪಿ.ಎಸ್. ಸಿಆರ್‌ಪಿಎಫ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದಾರೆ. ಪ್ರಸ್ತುತ ಗುರುಗಾವ್‌ನ ಸಿಆರ್‌ಪಿಎಫ್ ಅಕಾಡೆಮಿಯಲ್ಲಿ ತರಬೇತಿಯಲ್ಲಿದ್ದಾರೆ. ಸ್ಫೂರ್ತಿ ನೇಮಕ ಬಗ್ಗೆ 2017ರಲ್ಲಿ ಕನ್ನಡಪ್ರಭ ಮೊದಲು ವರದಿ ಪ್ರಕಟಿಸಿತ್ತು.

loader