- ಮುಂಬಯಿನ ಬೋರಿವಲಿಯಿಂದ ಚರ್ಚ್‌ಗೇಟ್‌ವರೆಗೆ ಪ್ರಯಾಣ ಆರಂಭಿಸಿದ ಮೊದಲ ಎಸಿ ಸ್ಥಳೀಯ ರೈಲು,- ಪಶ್ಚಿಮ ರೈಲ್ವೇ ಆರಂಭಿಸಿದ ಹೊಸ ಸೇವೆ- ಮೊದಲ ಪ್ರಯಾಣವನ್ನು ಸಂಭ್ರಮಿಸಿದ ಪ್ರಯಾಣಿಕರು.

ಮುಂಬಯಿ: ದೇಶದ ಮೊದಲ ಸ್ಥಳೀಯ ಎಸಿ ರೈಲು ಸಂಚಾರ ಆರಂಭಿಸಿದ್ದು, ಇಲ್ಲಿನ ಬೋರಿವಲಿಯಿಂದ ಚರ್ಚ್‌ಗೇಟ್‌ವರೆಗೆ ಸಂಚರಿಸಲಿದೆ.

ಪಶ್ಚಿಮ ರೈಲ್ವೇ ಆರಂಭಿಸಿರುವ ಈ ರೈಲು ಸೇವೆಯ ಮೊದಲ ಸಂಚಾರದಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವ ಮೂಲಕ ಮೊದಲ ಪ್ರಯಾಣವನ್ನು ಪ್ರಯಾಮಿಕರು ಸಂಭ್ರಮಿಸಿದರು. 

ಚೆನ್ನೈನಲ್ಲಿ ಅಭಿವೃದ್ಧಿಗೊಳಿಸಲಾದ ಈ ರೈಲಿಗೆ ಸುಮಾರು 54 ಕೋಟಿ ರೂ. ವೆಚ್ಚ ತಗುಲಿದ್ದು, 12 ಬೋಗಿಗಳನ್ನು ಅಳವಡಿಸಲಾಗಿದೆ. ಇದೀಗ ಆರು ಟ್ರಿಪ್‌ಗಳಲ್ಲಿ ಓಡುವ ಈ ರೈಲು, ಜನವರಿ 1, 2018ರಿಂದ ಚರ್ಚ್‌ಗೇಟ್‌ನಿಂದ ವಿರಾರ್‌ ನಿಲ್ದಾಣದವರೆಗೆ ಸಂಚರಿಸಲಿದೆ.

ಭಾರತೀಯ ರೈಲ್ವೆಯಿಂದ ಪ್ರಯಾಣಿಕರು ನಿರೀಕ್ಷಿಸುತ್ತಿರುವ ಬೇಡಿಕೆಗಳನ್ನು ಪೂರೈಸುವ ಅಂಗವಾಗಿ ಪಶ್ಚಿಮ ರೈಲ್ವೆ ಇಂಥದ್ದೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಇತರೆ ಬೇಡಿಕೆಗಳನ್ನು ಪೂರೈಸುವಲ್ಲಿ ಇಲಾಖೆ ಕಂಕಣಬದ್ಧವಾಗಿದೆ, ಎಂದು ರೈಲ್ವೆ ಪಿಆರ್‌ಒ ಹೇಳಿದ್ದಾರೆ.