ಬೆಂಗಳೂರಿನಲ್ಲಿ ಮತ್ತೊಂದು ಶೂಟೌಟ್ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ APMC ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಮೇಲೆ ಯಲಹಂಕದ ಕೋಗಿಲು ಕ್ರಾಸ್ ಬಳಿ ಇಬ್ಬರು ದುಷ್ಕರ್ಮಿಗಳು ಹಾಡು ಹಗಲೇ ಫೈರಿಂಗ್ ನಡೆಸಿದ್ದಾರೆ.

ಬೆಂಗಳೂರು(ಫೆ.03): ಬೆಂಗಳೂರಿನಲ್ಲಿ ಮತ್ತೊಂದು ಶೂಟೌಟ್ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ APMC ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಮೇಲೆ ಯಲಹಂಕದ ಕೋಗಿಲು ಕ್ರಾಸ್ ಬಳಿ ಇಬ್ಬರು ದುಷ್ಕರ್ಮಿಗಳು ಹಾಡು ಹಗಲೇ ಫೈರಿಂಗ್ ನಡೆಸಿದ್ದಾರೆ.

ಮಾರುಕಟ್ಟೆಗೆ ಹೋಗಿ ಮರಳುತ್ತಿದ್ದ ಸಂದರ್ಭದಲ್ಲಿ ಪಲ್ಸರ್ ಬೈಕ್'ನಲ್ಲಿ ಹಿಂಬಾಲಿಸಿ ಬಂದಿದ್ದ ಇಬ್ಬರು ಅನಾಮಿಕ ದುಷ್ಕರ್ಮಿಗಳು ಯಲಹಂಕದ ಕೋಗಿಲು ಕ್ರಾಸ್ ಬಳಿ ತಲುಪುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಫೈರಿಂಗ್'ನಲ್ಲಿ ಶ್ರೀನಿವಾಸ್ ಮೂರ್ತಿ ದೇಹಕ್ಕೆ ಮೂರು ಗುಂಡುಗಳು ಹೊಕ್ಕಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶ್ರೀನಿವಾಸ್ ಮೂರ್ತಿ ಹಿನ್ನೆಲೆ ಏನು?

ಶ್ರೀನಿವಾಸ್ ಮೂರ್ತಿ ಮೂಲತಃ ಮಾದನಾಯಕನಹಳ್ಳಿಯವರು. ಶ್ರೀನಿವಾಸ್ ಮೂರ್ತಿ ಹಾಗೂ ಪಾಯ್ಸನ್ ರಾಮ ಇಬ್ಬರೂ ಅಣ್ಣ- ತಮ್ಮಂದಿರು. ಪಾಯ್ಸನ್ ರಾಮನ ವಿರುದ್ಧ ಈಗಾಗಲೇ 40 ಕೇಸ್'ಗಳು ದಾಖಲಾಗಿದ್ದು, ಇವುಗಳಲ್ಲಿ 38 ಕೇಸ್'ಗಳು ಅಣ್ಣ ಶ್ರೀನಿವಾಸ್ ಮೂರ್ತಿಗಾಗಿ ಮಾಡಿದ್ದು ಎಂದು ತಿಳಿದು ಬಂದಿದೆ. ಈ ಪಾಯ್ಸನ್ ರಾಮ ಅಣ್ಣ ಶ್ರೀನಿವಾಸ್ ಮೂರ್ತಿಯ ಬೆನ್ನೆಲುಬಾಗಿ ನಿಂತಿದ್ದ. ಇವರಿಬ್ಬರೂ ಮಾದನಾಯಕನಹಳ್ಳಿ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿದ್ದಾರೆ.