Asianet Suvarna News Asianet Suvarna News

ಪಟಾಕಿ ತಂದ ಅವಾಂತರ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಾಯ

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪಟಾಕಿಯಿಂದ ಆಗಿರುವ ಗಾಯಾಳುಗಳ ಸಂಖ್ಯೆ ಕಡಿಮೆಯಾಗಿದೆ. ಆದರು ಚಿಕ್ಕಮಕ್ಕಳು ಪಟಾಕಿ ಹೊಡೆಯುವಾಗ ಎಚ್ಚರವಿರಲ್ಲಿ .

Fireworks more than 10 injured

ಬೆಂಗಳೂರು(ಅ.30): ದೀಪಾವಳಿಯ ಹಬ್ಬದಲ್ಲಿ ಪಟಾಕಿ ಹೊಡೆಯವ ಸಂದರ್ಭದಲ್ಲಿ ಕಣ್ಣಿಗೆ ಪೆಟ್ಟಾಗಿ ಸುಮಾರು 10ಕ್ಕೂ ಹೆಚ್ಚು ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಪಟಾಕಿ ತಂದ ಅವಾಂತರದಿಂದಾಗಿ ಚಾಮರಾಜಪೇಟೆ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 8 ವರ್ಷದ ಧರಣ್  ಹಾಗೂ ಹಲಸೂರಿನ ಕವಿತಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಪಟಾಕಿ ಅವಾಂತರದಿಂದಾಗಿ ರಾಜಾಜಿನಗರ ನಾರಾಯಣ ಆಸ್ಪತ್ರೆಯಲ್ಲಿ ಏಳು, ನಾರಾಯಣ ನೇತ್ರಾಲಯ ಬೊಮಸಂದ್ರದಲ್ಲಿ ಇಬ್ಬರು, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆದಿದ್ದಾರೆ. 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದ ಆಗಿರುವ ಗಾಯಾಳುಗಳ ಸಂಖ್ಯೆ ಕಡಿಮೆಯಾಗಿದೆ. ಆದರು ಚಿಕ್ಕಮಕ್ಕಳು ಪಟಾಕಿ ಹೊಡೆಯುವಾಗ ಎಚ್ಚರವಿರಲ್ಲಿ. ಚಿಕ್ಕ ಮಕ್ಕಳಿಗೆ ಅಪಾಯಕಾರಿಯಾದ ಪಟಾಕಿ ಹೊಡೆಯಲು ಬಿಡದಿರಿ. ಸಂಭ್ರಮದ ದೀಪಾವಳಿ ಆಚರಣೆ ಅವಾಂತರಕ್ಕೆ ಕಾರಣವಾಗದಿರಲ್ಲಿ. ಬೆಳಕಿನ ಹಬ್ಬ  ನಮ್ಮ ಬೆಳಕನ್ನು ಆರಸದಿರಲ್ಲಿ .ಪುಟಾಣಿಗಳೇ ಎಚ್ಚರವಿರಲ್ಲಿ. 
 

Follow Us:
Download App:
  • android
  • ios