ದೀಪಿಕಾ ಪಡುಕೋಣೆ ವಾಸವಿರುವ ಅಪಾರ್ಟಮೆಂಟ್‌ನಲ್ಲಿ ಬೆಂಕಿ ಅವಘಢ..!

Fire On Top Floor Of Mumbai High-Rise, Deepika Padukone Among Residents
Highlights

ದೀಪಿಕಾ ಪಡುಕೋಣೆ ವಾಸವಿರುವ ಅಪಾರ್ಟಮೆಂಟ್‌ಗೆ ಬೆಂಕಿ

ವಲಿರ್ಲಿಯ 33 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಢ

ಕಟ್ಟಡದ 26ನೇ ಅಂತಸ್ತಿನಲ್ಲಿ ದೀಪಿಕಾ ವಾಸ

ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ

ಮುಂಬೈ(ಜೂ.13): ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಾಸವಿರುವ ಅಪಾರ್ಟಮೆಂಟ್‌ನಲ್ಲಿ ಬೆಂಕಿ ಅವಘಢ ಸಂಭವಿಸಿದೆ. ಇಲ್ಲಿನ ವರ್ಲಿಯ 33 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬಿವುಮಾಂಡೆ ಕಟ್ಟಡದ ಬಿ ವಿಭಾಗದ ಕೊನೆಯ ಎರಡು ಅಂತಸ್ತಿಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಮುಗಿಲೆತ್ತರಕ್ಕೆ ರಾಚಿದೆ. ಇದೇ ಕಟ್ಟಡದ 26ನೇ ಅಂತಸ್ತಿನಲ್ಲಿ ದೀಪಿಕಾ ಪಡುಕೋಣೆ ವಾಸಿಸುತ್ತಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇನ್ನು ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಟ್ಟವು. ಆದರೆ, ಬೆಂಕಿ ಅವಘಡದಿಂದಾಗಿ ಕಟ್ಟಡದ ಅವಶೇಷಗಳಡಿ ಕೆಲವರು ಸಿಲುಕಿಕೊಂಡಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇನ್ನು ಬೆಂಕಿ ಅವಘಢದಲ್ಲಿ ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

loader