ಅರುಣ್ ಜೇಟ್ಲಿ ದಾಖಲಾಗಿರುವ ಏಮ್ಸ್’ನಲ್ಲಿ ಅಗ್ನಿ ಅವಘಢ| ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ| ತುರ್ತು ನಿಗಾ ಘಟಕ ಹಾಗೂ ವೈದ್ಯರ ಕೋಣೆಗಳಿಗೆ ಹಾನಿ| ಆಸ್ಪತ್ರೆಯ ಮತ್ತೊಂದು ಮಹಡಿಯಲ್ಲಿ ಅರುಣ್ ಜೇಟ್ಲಿ ಸುರಕ್ಷಿತ| ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವ 34 ಅಗ್ನಿಶಾಮಕ ವಾಹನಗಳು| 

ನವದೆಹಲಿ(ಆ.18): ಮಾಜಿ ವಿತ್ತ ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ದಾಖಲಾಗಿರುವ ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ನಿಗಾ ಘಟಕ ಹಾಗೂ ವೈದ್ಯರ ಕೋಣೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

Scroll to load tweet…

ಕಿಡ್ನಿ ಸಮಸ್ಯೆಯಿಂದ ಬಳಳುತ್ತಿರುವ ಅರುಣ್ ಜೇಟ್ಲಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಅವರು ಆಸ್ಪತ್ರೆಯ ಕಟ್ಟಡದ ಮತ್ತೊಂದು ಮಹಡಿಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.

ಸದ್ಯ ಸ್ಥಳಕ್ಕೆ 34 ಅಗ್ನಿಶಾಮಕ ದಳ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.