ಬೆಂಗಳೂರಿನಿಂದ ದೆಹಲಿಗೆ ಸಾಗಿಸುತ್ತಿದ್ದ ಮೇಟ್ರೋ ಬೋಗಿಗೆ ವಿದ್ಯುತ್ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಕೋನಪ್ಪನ ಅಗ್ರಹಾರ ಜಂಕ್ಷನ್ ಬಳಿ ಬೆಳಗಿನ ಜಾವ 4ರ ಸಮಯದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು(ಜೂ.04): ಬೆಂಗಳೂರಿನಿಂದ ದೆಹಲಿಗೆ ಸಾಗಿಸುತ್ತಿದ್ದ ಮೇಟ್ರೋ ಬೋಗಿಗೆ ವಿದ್ಯುತ್ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಕೋನಪ್ಪನ ಅಗ್ರಹಾರ ಜಂಕ್ಷನ್ ಬಳಿ ಬೆಳಗಿನ ಜಾವ 4ರ ಸಮಯದಲ್ಲಿ ಈ ಘಟನೆ ನಡೆದಿದೆ.
ವಿದ್ಯುತ್ ಸ್ಪರ್ಶವಾಗುತ್ತಿದ್ದಂತೆ ಕಂಟೈನರ್ ಚಾಲಕ ತಕ್ಷಣ ಕೆಳಗಿಳಿದು ಬಚಾವ್ ಆಗಿದ್ದಾನೆ, ಆದರೆ ಕಂಟೈನರ್ ಹಿಂಭಾಗದಲ್ಲಿ ಬರುತ್ತಿದ್ದ ಓಲಾ ಕ್ಯಾಬ್'ಗೆ ಇದೇ ಬೆಂಕಿ ತಾಕಿ ಕ್ಯಾಬ್'ನಲ್ಲಿದ್ದ ಚಾಲಕನಿಗೆ ವಿದ್ಯುತ್ ಸ್ಪರ್ಶ ಉಂಟಾಗಿ ಬಾಯಲ್ಲಿ ರಕ್ತ ಬಂದು ಕಾರಿನಲ್ಲಿ ಕುಸಿದಿದ್ದಾನೆ, ತಕ್ಷಣ ಸ್ಥಳದಲ್ಲಿದ್ದವರು ಅಗ್ನಿಶಾಮಕದಳವರಿಗೆ ಮಾಹಿತಿ ನೀಡಿದ್ದಾರೆ ಕಾರ್ಯ ಪ್ರವೃತ್ತರಾದ ಅಗ್ನಿಶಾಮಕದಳದವರು ಬೆಂಕಿ ನಂದಿಸಿ ವಿದ್ಯುತ್ ಕಡಿತಗೊಳಿಸಿ ಚಾಲಕನನ್ನು ವಿಕ್ಟೋರಿಯಾಗೆ ರವಾನಿಸಿದ್ದಾರೆ, ತಕ್ಷಣಕ್ಕೆ ಕ್ಯಾಬ್ ಚಾಲಕ ಪ್ರಾಣಪ್ರಾಯದಿಂದ ಪಾರಾಗಿದ್ದರು ಶೇಕಡ 60ರಷ್ಟು ಸುಟ್ಟ ಗಾಯಗಳಾಗಿ ಪರಿಸ್ಥಿತಿ ಗಂಬೀರವಾಗಿದೆಯೆಂದು ಹೇಳಲಾಗುತ್ತಿದೆ.
ಇನ್ನೂ ಈ ಬೋಗಿಯನ್ನು ಬೆಂಗಳೂರಿನ ಬೆಮೆಲ್'ನಿಂದ ದೆಹಲಿಗೆ ಸಾಗಿಸಲಾಗುತಿತ್ತು.
