ಬಟ್ಟೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಇಡೀ ಅಂಗಡಿಯ ಬಟ್ಟೆಗಳು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರು(ಫೆ.09): ಬಟ್ಟೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಇಡೀ ಅಂಗಡಿಯ ಬಟ್ಟೆಗಳು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿ ನಡೆದಿದೆ.
ಕೆಜಿ ರಸ್ತೆಯ ಭೂಮಿಕಾ ಚಿತ್ರಮಂದಿರದ ಎದುಗಡೆಯ ಪ್ರಭಾತ್ ಕಾಂಪ್ಲೆಂಕ್ಸ್ 'ನಲ್ಲಿರುವ ಶಬ್ನೂರ್ ಡ್ರೆಸೆಸ್ಟ್ ಎಂಬಾ ಬಟ್ಟೆ ಅಂಗಡಿಗೆ ಬೆಂಕಿ ಬಿದ್ದಿದ್ದು ಸುಮಾರು 8 ಲಕ್ಷ ಮೌಲ್ಯದ ಬಟ್ಡೆಗಳು ಸುಟ್ಟು ಕರಕಲಾಗಿದೆ. ಇನ್ನು ಈ ಅಂಗಡಿಯ ಮಾಲೀಕರಾದ ಅಬ್ದುಲ್ ಖಾಲಿದ್ ಎಂದಿನಂತೆ ನಿನ್ನೆ 9 ಗಂಟೆಗೆ ಅಂಗಡಿ ಕ್ಲೋಸ್ ಮಾಡಿ ಹೋಗಿದ್ದರು. ಆದರೆ ಮನೆಗೆ ಹೋಗಿ 1 ಗಂಟೆ ಕಳೆಯುವಷ್ಟರಲ್ಲೇ ಬೆಂಕಿ ಬಿದ್ದಿದ್ದ ಗೊತ್ತಾಗಿದೆ.
ಇನ್ನು ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್'ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು ಎರಡು ಅಗ್ನಿಶಾಮಕ ದಳದ ವಾಹನ ಬೆಂಕಿಯನ್ನು ಸಂಪೂರ್ಣ ನಂದಿಸಿತು. ಇನ್ನು ಉಪ್ಪಾರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
