ಕೃಷ್ಣರಾಜ್ ಎಂಬ ಮೀನುಗಾರಿಕಾ ಬೋಟ್`ನಲ್ಲಿ  ಮೀನು ಹಿಡಿಯುವುದರಲ್ಲಿ ತೊಡಗಿದ್ದಾಗ ದಿಢೀರನೇ ಬೋಟ್`ಗೆ ಬೆಂಕಿ ತಗುಲಿದೆ. ಬೆಂಕಿಯ  ಕೆನ್ನಾಲಿಗೆ ಓರ್ವ ಮೀನುಗಾರ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಭಾರತೀಯ ನೌಕಾದಳ ಬೋಟ್ ನಲ್ಲಿದ್ದ  ಇತರೆ ಐವರನ್ನು  ರಕ್ಷಿಸಿದ್ದಾರೆ. ನಾಲ್ವರ ಪೈಕಿ  ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದುರಂತಕ್ಕೀಡಾದ ಬೋಟ್ ಅನ್ನು ದಿಕ್ಸಾ ಎಂಬ ಟೋಯಿಂಗ್ ಬೋಟ್ ಮೂಲಕ ದಡಕ್ಕೆ ಎಳೆದು ತರಲಾಗಿದೆ.

ಪೋರ್ ಬಂದರ್(ನ.20): ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿರುವಾಗಲೇ ಬೋಟ್`ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಮೀನುಗಾರ ಸಾವಿಗೀಡಾದ ಭೀಕರ ಘಟನೆ ಗುಜರಾತ್ ಕರಾವಳಿಯಲ್ಲಿ ನಡೆದಿದೆ. ಗುಜರಾತ್`ನ ಪೋರ್ ಬಂದರ್ ಸಮೀಪ ಅರೇಬಿಯನ್ ಸಮುದ್ರದಲ್ಲಿ ಈ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred