ಈ ಅಗ್ನಿ ಅವಘಡದಲ್ಲಿ ಆದ ಹಾನಿಯ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಮುಂಬೈ(ಜು.10): ಭಾರತದ ನಂ.1 ಶ್ರೀಮಂತ, ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ವಿಶ್ವವಿಖ್ಯಾತ ೨೭ ಅಂತಸ್ತಿನ ಮನೆ ಆ್ಯಂಟಿಲಾದಲ್ಲಿ ಸೋಮವಾರ ಅಗ್ನಿ ಆಕಸ್ಮಿಕ ಸಂಭವಿಸಿದೆ. ರಾತ್ರಿ 9 ಗಂಟೆ ವೇಳೆಗೆ ಕಟ್ಟಡದ ೬ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದೆ. ಈ ಅಗ್ನಿ ಅವಘಡದಲ್ಲಿ ಆದ ಹಾನಿಯ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಅಂದಾಜು 13000ಕೋಟಿ ರು. ಮೌಲ್ಯದ ಹೊಂದಿರುವ ಮನೆಯನ್ನು ನೋಡಿಕೊಳ್ಳಲೆಂದೇ 600 ಕೆಲಸಗಾರರು ಇದ್ದಾರೆ. ಇದು ಒಂದೇ ಕುಟುಂಬಕ್ಕೆ ನಿರ್ಮಾಣಗೊಂಡ ವಿಶ್ವದ ದುಬಾರಿ ಮನೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.