Asianet Suvarna News Asianet Suvarna News

ಸರ್ಕಾರಿ ಕಟ್ಟಡದಲ್ಲಿ ಅಗ್ನಿ ದುರಂತ: ಮಹತ್ವದ ದಾಖಲೆಗಳು ಭಸ್ಮ!

ದೆಹಲಿಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ದುರಂತ| ಕಸ್ಮಿಕ ಬೆಂಕಿಯಿಂದ ಮಹತ್ವದ ಸರ್ಕಾರಿ ದಾಖಲೆಗಳು ಸುಟ್ಟು ಭಸ್ಮ| 24 ಅಗ್ನಿಶಾಮಕ ವಾಹನಗಳಿಂದ ರಕ್ಷಣಾ ಕಾರ್ಯ|

Fire At Government Building In Central Delhi Security Personnel Injured
Author
New Delhi, First Published Mar 6, 2019, 10:58 AM IST

ನವದೆಹಲಿ[ಮಾ.06]: ಮಹತ್ವದ ಸರ್ಕಾರಿ ದಾಖಲೆಗಳಿದ್ದ ದೆಹಲಿಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಆಕಸ್ಮಿಕ ಬೆಂಕಿಯಿಂದ ಮಹತ್ವದ ಸರ್ಕಾರಿ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಅಲ್ಲದೇ, ಇಲ್ಲಿನ ಭದ್ರತಾ ಸಿಬ್ಬಂದಿಗೆ ಸುಟ್ಟ ಗಾಯಗಳಾಗಿವೆ. ಸ್ಥಳಕ್ಕೆ 24 ಅಗ್ನಿ ಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ದೆಹಲಿಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿನ 5ನೇ ಮಹಡಿಯಲ್ಲಿರುವ ಪಂಡಿತ್ ದೀನ್ ದಯಾಳ್ ಅಂತ್ಯೋದಯ ಭವನದಲ್ಲಿ ಇಂದು ಮಾ.06ರಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಗ್ನಿ ದುರಂತದಲ್ಲಿ ಹಲವಾರು ಮಹತ್ವದ ಸರ್ಕಾರಿ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಘಟನೆಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲವಾದರೂ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಈ ಬಹುಮಹಡಿ ಕಟ್ಟಡದಲ್ಲಿ ಭಾರತೀಯ ವಾಯುಪಡೆ ಶಾಖೆ, ನೀರು ಮತ್ತು ನೈರ್ಮಲ್ಯ ಸಚಿವಾಲಯ, ಅರಣ್ಯ ಸಚಿವಾಲಯ, , ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಅಂತ್ಯೋದಯ ಭವನದಲ್ಲಿದೆ ಎಂದು ವರದಿ ಹೇಳಿದೆ. 2016ರವರೆಗೆ ಈ ಭವನವನ್ನು ಪರ್ಯಾವರಣ್ ಭವನ್ ಎಂದೇ ಕರೆಯಲಾಗುತ್ತಿತ್ತು.ಬಳಿಕ ದೀನ್ ದಯಾಳ್ ಅಂತ್ಯೋದಯ ಭವನ್ ಎಂದು ಮರು ನಾಮಕರಣ ಮಾಡಲಾಗಿತ್ತು.

Follow Us:
Download App:
  • android
  • ios