ಕನ್ನಡದ ಖ್ಯಾತ ನಟಿಯ ಮೇಲೆ FIR..! ಬಂಧನದ ಭೀತಿಯಲ್ಲಿ ಹೀರೋಯಿನ್

First Published 10, Mar 2018, 11:14 AM IST
FIR Filed On Kannada Heroin Sindhu Menan
Highlights

ಬರೋಡಾ ಬ್ಯಾಂಕ್ ಮ್ಯಾನೇಜರ್ ರಮೇಶ್ ದೂರು ನೀಡಿದ್ದು, ಆರ್.ಎಂ.ಸಿ ಯಾರ್ಡ್ ಪೊಲೀಸರಿಂದ ನಟಿ ಸಿಂಧು ಮೆನನ್ ಸಹೋದರ ಮನೋಜ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಅಮೇರಿಕಾದಲ್ಲಿರುವ ನಟಿ ಸಿಂಧು ಮೆನನ್ ವಿರುದ್ಧ ಆರ್'ಎಂಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಕೇಸ್ ಅಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರು(ಮಾ.10): ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್'ನಿಂದ ಹಣ ಪಡೆದು ವಂಚನೆ ಮಾಡಿದ ಆರೋಪದಡಿ ಕನ್ನಡದ ನಟಿ ಸಿಂಧು ಮೆನನ್ ಮೇಲೆ ಎಫ್'ಐಆರ್ ದಾಖಲಾಗಿದೆ. ನಾಯಕ ನಟಿ ಸಿಂಧು ಮೆನನ್, ಸಹೋದರ ಮನೋಜ್ ಕಾರ್ತಿಕೇನ್ ವರ್ಮ, ನಾಗಶ್ರೀ ಶಿವಣ್ಣ, ಸುಧಾ ರಾಜಶೇಖರ್ ಮೇಲೆ ಆರ್'ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್'ಐಆರ್ ದಾಖಲಾಗಿದ್ದು ನಟಿ ಬಂಧನದ ಭೀತಿಯಲ್ಲಿದ್ದಾರೆ.

ನಕಲಿ ದಾಖಲೆ ನೀಡಿ ಬರೋಡಾ ಬ್ಯಾಂಕ್'ನಿಂದ ಕಾರು ಖರೀದಿಗೆ ನಟಿ ಹಾಗೂ ಸಹೋದರ 36 ಲಕ್ಷ ಹಣ ಪಡೆದು ವಂಚನೆ ಮಾಡಿದ್ದರು. ಪ್ರಕರಣದಲ್ಲಿ ಸಿಂಧು ಮೂರನೇ ಆರೋಪಿಯಾಗಿದ್ದಾರೆ. ಬರೋಡಾ ಬ್ಯಾಂಕ್ ಮ್ಯಾನೇಜರ್ ರಮೇಶ್ ದೂರು ನೀಡಿದ್ದು, ಆರ್.ಎಂ.ಸಿ ಯಾರ್ಡ್ ಪೊಲೀಸರಿಂದ ನಟಿ ಸಿಂಧು ಮೆನನ್ ಸಹೋದರ ಮನೋಜ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಅಮೇರಿಕಾದಲ್ಲಿರುವ ನಟಿ ಸಿಂಧು ಮೆನನ್ ವಿರುದ್ಧ ಆರ್'ಎಂಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಕೇಸ್ ಅಡಿ ಪ್ರಕರಣ ದಾಖಲಾಗಿದೆ.

ಕನ್ನಡದ ಚಿತ್ರಗಳಾದ ಖುಷಿ ,ನಂದಿ ,ಸೇರಿದಂತೆ ಮಲಯಾಳಂ ,ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಸಿಂಧು ಮೆನನ್ ನಟಿಸಿದ್ದಾರೆ.

loader