Asianet Suvarna News Asianet Suvarna News

ಬ್ಯಾಂಕ್'ನಲ್ಲಿ ಹಳೆ ನೋಟು ಅಕ್ರಮ ಬದಲಾವಣೆ: ಕೊಳ್ಳೇಗಾಲ ಎಸ್'ಬಿಎಂ ಕ್ಯಾಷಿಯರ್ ವಿರುದ್ಧ FIR

ಐದುನೂರು ಮತ್ತು ಸಾವಿರ ರೂಪಾಯಿ ನೋಟುಗಳು ಅಮಾನ್ಯಗೊಂಡ ನಂತರ ನೋಟು ಬದಲಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಕಳೆದ ನಾಲ್ಕಾರು ದಿನಗಳಿಂದ ನಿತ್ಯ ಬ್ಯಾಂಕ್'​ಗಳ ಕಳ್ಳಾಟ ಬಯಲಾಗುತ್ತಲೇ ಇವೆ. ಈ ಪಟ್ಟಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಕೂಡ ಸೇರ್ಪಡೆಯಾಗಿದೆ.

Fir Filed Against SBI Cashier for illegal not exchange

ಮೈಸೂರು(ಡಿ.08): ಐದುನೂರು ಮತ್ತು ಸಾವಿರ ರೂಪಾಯಿ ನೋಟುಗಳು ಅಮಾನ್ಯಗೊಂಡ ನಂತರ ನೋಟು ಬದಲಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಕಳೆದ ನಾಲ್ಕಾರು ದಿನಗಳಿಂದ ನಿತ್ಯ ಬ್ಯಾಂಕ್'​ಗಳ ಕಳ್ಳಾಟ ಬಯಲಾಗುತ್ತಲೇ ಇವೆ. ಈ ಪಟ್ಟಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಕೂಡ ಸೇರ್ಪಡೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಶಾಖೆ ಅಧಿಕಾರಿಯೊಬ್ಬರು ನೋಟು ಬದಲಾವಣೆ ವೇಳೆಯಲ್ಲಿ ಅಕ್ರಮ ಚಟುವಟಿಕೆ ಮತ್ತು ಕ್ರಿಮಿನಲ್ ಸಂಚಿನಲ್ಲಿ ಭಾಗಿ ಆಗಿರುವುದು ಖಚಿತಪಟ್ಟಿದೆ. ನೋಟು ಬದಲಾವಣೆ ಅಕ್ರಮ ಚಟುವಟಿಕೆಗಳಲ್ಲಿ  ಬ್ಯಾಂಕ್‌ಗಳಲ್ಲಿ ಮುಖ್ಯ ಪ್ರಬಂಧಕರಲ್ಲದೆ, ನಗದು ಗುಮಾಸ್ತರು ಸೇರಿದಂತೆ ಬ್ಯಾಂಕ್‌ಗಳ ಇತರೆ ಸ್ತರದ ಅಧಿಕಾರಿ, ನೌಕರರು ಕೂಡ ಭಾಗಿ ಆಗಿರುವುದನ್ನು ಸಿಬಿಐನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಕೊಳ್ಳೇಗಾಲ ಎಸ್​ಬಿಎಂ ಕ್ಯಾಷಿಯರ್ ವಿರುದ್ಧ FIR

ಒಂದೂವರೆ ಕೋಟಿ ಕಪ್ಪುಹಣ ವೈಟ್ ಮಾಡಿಕೊಟ್ಟ ಆರೋಪದ ಮೇಲೆ ಕೊಳ್ಳೆಗಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ ಶಾಖೆಯ ಸೀನಿಯರ್ ಕ್ಯಾಷಿಯರ್​ ಪರಶಿವಮೂರ್ತಿ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್ ದಾಖಲಿಸಿಕೊಂಡಿದೆ. ನೋಟು ಬದಲಾವಣೆಯ ಅಕ್ರಮ ಚಟುವಟಿಕೆ ಮತ್ತು ಕ್ರಿಮಿನಲ್ ಸಂಚು ರೂಪಿಸಿರುವ ಪ್ರಕರಣ ಸಂಬಂಧ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ೩ನೇ ಎಫ್‌ಐಆರ್‌ನ್ನು ದಾಖಲಿಸಿಕೊಂಡಿದೆ.

ಪರಶಿವಮೂರ್ತಿ ವಿರುದ್ಧ ಐಪಿಸಿ 120 B, 409, 420 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ 13(2) ಮತ್ತು 13(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಕಮಿಷನ್ ಪಡೆದು ಒಂದೂವರೆ ಕೋಟಿ ಬದಲಾವಣೆ

ಖಾಸಗಿ ವ್ಯಕ್ತಿಗಳು ಮತ್ತು ಬ್ಯಾಂಕ್‌ ಸಹದ್ಯೋಗಿಗಳ ಜತೆ ಸೇರಿ ಕ್ರಿಮಿನಲ್ ಸಂಚು ರೂಪಿಸಿ 1 ಕೋಟಿ 51 ಲಕ್ಷದ 24 ಸಾವಿರ ರೂಪಾಯಿ ಹಳೆಯ ನೋಟುಗಳನ್ನು ಬದಲಾಯಿಸಿ ಹಣದ ರೂಪದಲ್ಲಿ ಲಾಭ ಪಡೆದಿರೋದು ಸಿಬಿಐ ಪತ್ತೆ ಹಚ್ಚಿದೆ. ನವೆಂಬರ್ ೧೦ರಿಂದ ೧೩ರವರೆಗೆ ಈ ಚಟುವಟಿಕೆ ನಡೆದಿರೋದು. ಆದ್ರೆ, ಆ ಹಣ ಯಾರಿಗೆ ಸೇರಿದ್ದು ಅನ್ನೋದ್ರ ಬಗ್ಗೆ ಉಲ್ಲೇಖವಿಲ್ಲ.

ಒಟ್ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆಲ ಖಾಸಗಿ ವ್ಯಕ್ತಿಗಳ ಬಳಿಯಿದ್ದ ಹಳೆಯ ನೋಟುಗಳಿಂದ ಹೊಸ ನೋಟುಗಳಿಗೆ ಪರಿವರ್ತಿಸಲಾಗಿದೆ.

Follow Us:
Download App:
  • android
  • ios