ನಟ ವಿನಯ್ ರಾಜ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲು ಮಾಡಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿದೆ. ರಾಘವೇಂದ್ರ ರಾಜ್’ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ವಿರುದ್ಧ ಅಮೃತೇಶ್ ರಿಟ್ ಸಲ್ಲಿಸಿದ್ದಾರೆ.
ಬೆಂಗಳೂರು (ಜ.2): ನಟ ವಿನಯ್ ರಾಜ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲು ಮಾಡಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿದೆ. ರಾಘವೇಂದ್ರ ರಾಜ್’ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ವಿರುದ್ಧ ಅಮೃತೇಶ್ ರಿಟ್ ಸಲ್ಲಿಸಿದ್ದಾರೆ.
ಎನ್ಇಎ ಕಾಯ್ದೆ ಅನ್ವಯ ಚಿತ್ರೀಕರಣ ಮಾಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಸ್ಮಾರಕಗಳ ಸಂರಕ್ಷಣ ಕಾಯ್ದೆಯ ಅಡಿಯಲ್ಲಿ ಈಗಾಗಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಇನ್ನೂ ಯಾವುದೇ ರೀತಿಯಾದ ಕ್ರಮ ಕೈಗೊಂಡಿಲ್ಲ.
ಶೂಟಿಂಗ್ ಅನುಮತಿ ನೀಡಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ರಿಟ್ ಸಲ್ಲಿಸಲಾಗಿದೆ. ಇದರಲ್ಲಿ ಕೋರ್ಟಿನಲ್ಲಿ ಶೂಟ್ ಮಾಡಿರುವ ದೃಶ್ಯಗಳನ್ನು ತೆಗೆಯಲು ಕೋರಲಾಗಿದೆ. ವಿನಯ್ ಅವರ ಅನಂತು / ನುಸ್ರತ್ ಚಿತ್ರದ ಫೊಟೊಶೂಟ್ ಇಲ್ಲಿ ನಡೆಸಿದ್ದರು.
