ಬಂಡಾ, ಉತ್ತರ ಪ್ರದೇಶ[ಸೆ. 05]  ನಾನ್ ವೆಜ್ ಬಿರಿಯಾನಿಯನ್ನು ಹಿಂದೂ ಗ್ರಾಹಕರಿಗೆ ನೀಡಿದ 43 ಜನರ ಮೇಲೆ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಅರಸ್ ಹಬ್ಬದ ವೇಳೆ ಮಹೋಬಾ ಜಿಲ್ಲೆಯಲ್ಲಿ ನಾನ್ ವೆಜ್ ನೀಡಿದವರ ಮೇಲೆ  ಪ್ರಕರಣ ದಾಖಲಿಸಲಾಗಿದೆ.

ಶೇಕ್ ಫೀರ್ ಬಾಬಾ ಅವರ ಸ್ಮರಣಾರ್ತ ಹಬ್ಬ ಆಯೋಜನೆ ಮಾಡಲಾಗಿತ್ತು. ಆಗಸ್ಟ್ 31 ರಂದು ಛರ್ಖರಿ ವ್ಯಾಪ್ತಿಯ ಸಲಾತ್ ಗ್ರಾಮದಲ್ಲಿನ ಘಟನೆ ಇದೀಗ ಪ್ರಕರಣದ ರೂಪ ಪಡೆದುಕೊಂಡಿದೆ.

ಉಪವಾಸ ನಿರತ ವಕೀಲನಿಗೆ ಚಿಕನ್: ಜೊಮ್ಯಾಟೋಗೆ ಫೈನ್!

ಬಿಜೆಪಿ ಎಂಎಲ್ಎ ಬ್ರಿಜಭೂಷಣ ರಜಪೂತ ಹಳ್ಳಿಗೆ ಭೇಟಿ ನೀಡಿದಾಗ ಸ್ಥಳೀಯರು ನಾನ್ ವೆಜ್ ನೀಡಿದ ಬಗ್ಗೆ ದೂರು ಹೇಳಿದ್ದಾರೆ. ನಮ್ಮ ಭಾವನೆಗಳಿಗೆ ಧಕ್ಕೆ ಬಂದಿದೆ ಎಂದು ಆತಂಕ ತೋಡಿಕೊಂಡಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದಾದ ನಂತರದಲ್ಲಿ ಎಫ್ ಐ ಆರ್ ನೋಂದಣಿಯಾಗಿದೆ..

ಗ್ರಾಮಸ್ಥರಿಗೆ ನಾನ್ ವೆಜ್ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ತನಿಖೆ ಜಾರಿಯಲ್ಲಿದ್ದು ಇಲ್ಲಿವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಎಸ್ ಪಿ ಸ್ವಾಮಿ ನಾಥ್ ತಿಳಿಸಿದ್ದಾರೆ.